ಪಾಕಿಸ್ತಾನದ ಚೀನಾ ರಾಯಭಾರಿ ಕಚೇರಿಯಲ್ಲಿ ಗುಂಡಿನದಾಳಿ; ಇಬ್ಬರ ಬಲಿ

ಇಸ್ಲಾಮಾಬಾದ್​: ಕರಾಚಿಯಲ್ಲಿನ ಚೀನಾ ರಾಯಭಾರಿ ಕಚೇರಿ ಎದುರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಬಲಿಯಾಗಿದ್ದಾರೆ ಎಂದು ಅಲ್ಲಿನ ಡಾನ್​ ಪತ್ರಿಕೆ ವರದಿ ಮಾಡಿದೆ.

ನಾಲ್ವರು ಗನ್​ಮ್ಯಾನ್​ಗಳು ಚೀನಾ ರಾಯಭಾರಿ ಕಚೇರಿ ನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಚೆಕ್​ಪೋಸ್ಟ್​ಬಳಿ ಅವರನ್ನು ಅಲ್ಲಿನ ಸೆಕ್ಯೂರಿಟಿಗಾರ್ಡ್​ಗಳು ತಡೆದಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಲ್ಲಲಾಗಿದೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂರು-ನಾಲ್ಕು ಜನ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೆಕ್ಯೂರಿಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಎಷ್ಟು ಜನ ಬಲಿಯಾಗಿದ್ದಾರೆ ಎಂಬ ಬಗ್ಗೆ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.ಘಟನೆ ಬಳಿಕ ಈ ದುಷ್ಕರ್ಮಿಗಳು ಓಡಿಹೋಗಿದ್ದು, ಈ ಘಟನೆ ಯಾವ ಕಾರಣಕ್ಕೆ ನಡೆದಿದೆ  ಎಂಬುದು ತಿಳಿದುಬಂದಿಲ್ಲ. ಸ್ಥಳದಲ್ಲಿ ಬಾಂಬ್​ ದಾಳಿ ಕೂಡ ನಡೆದಿದೆ.

ಸ್ಥಳಕ್ಕೆ  ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿದ್ದು ಸಿಂಧ್​ ಪ್ರಾಂತ್ಯದ ಗವರ್ನರ್​ ಇಮ್ರಾನ್​ ಇಸ್ಮೈಲ್​ ಈ ಕುರಿತು ಐಜಿಗೆ ವರದಿಯನ್ನು ಕೇಳಿದ್ದಾರೆ. ಈ ಕುರಿತು ಸಿಂಧ್​ ಪ್ರಾಂತ್ಯದ ಮುಖ್ಯಮಂತ್ರಿಗಳಿಂದಲೂ ವರದಿ ಕೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ