ಕೊಹ್ಲಿ ಪಡೆಗೆ ಇಂದು ಡು ಆರ್ ಡೈ ಮ್ಯಾಚ್

ಮೇಲ್ಬೋರ್ನ್: ಫಿಂಚ್ ಪಡೆ ವಿರುದ್ಧ ಮೊದಲ ಪಂದ್ಯದಲ್ಲಿ ಮುಗ್ಗರಿಸಿ ವಿರೋಚಿತ ಸೋಲು ಕಂಡಿರುವ ಟೀಂ ಇಂಡಿಯಾ ಮೇಲ್ಬೋರ್ನ್‍ನಲ್ಲಿ ಅಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ ಎದುರಿಸಲಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಿಂಚ್ ಪಡೆ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಮಹಾ ಸವಾಲೊಂದನ್ನ ಎದುರಿಸುತ್ತಿದ್ದಾರೆ. ಟಿ20 ಆವೃತ್ತಿಯಲ್ಲಿ ಕೊಹ್ಲಿ ನಾಯತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದು ಈ ಎಲ್ಲ ಪ್ರಶ್ನೆಗಳಿಗೆ ಕೊಹ್ಲಿ ಎರಡನ್ನೇ ಪಂದ್ಯದಲ್ಲಿ ಉತತರ ಕೊಡಬೇಕಿದೆ.
ಮೊನ್ನೆ ಬ್ರಿಸ್ಬೇನ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಮಾಡಿದ ಕೆಲವು ತಪ್ಪುಗಳಿಂದಾಗಿ ಕೊನೆಯ ಓವರ್‍ನಲ್ಲಿ ಪಂದ್ಯವನ್ನ ಕೈಚೆಲ್ಲಿಕೊಳ್ಳಬೇಕಾಯಿತು. ಜೊತೆಗೆ ನಾಯಕ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ತೆಗದುಕೊಂಡ ತಪ್ಪು ನಿರ್ಧಾರಗಳು ಸೋಲಿನ ಸುಳಿಯಲಿ ಸಿಲುಕುವಂತೆ ಮಾಡಿತು.
ಇನ್ನು ಫಿಂಚ್ ಪಡೆಯಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು ಬೌಲಿಂಗ್ ವಿಭಾಗದಲ್ಲಿ ಸುಧಾರಿಸಿಕೊಳ್ಳಬೇಕಿದೆ. ಇಂದು ನಡೆಯುವ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲಬೇಕಾದ ಒತ್ತಡಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ