ಇಸ್ಲಾಮಾಬಾದ್: ಕರಾಚಿಯಲ್ಲಿನ ಚೀನಾ ರಾಯಭಾರಿ ಕಚೇರಿ ಎದುರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಬಲಿಯಾಗಿದ್ದಾರೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.
ನಾಲ್ವರು ಗನ್ಮ್ಯಾನ್ಗಳು ಚೀನಾ ರಾಯಭಾರಿ ಕಚೇರಿ ನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಚೆಕ್ಪೋಸ್ಟ್ಬಳಿ ಅವರನ್ನು ಅಲ್ಲಿನ ಸೆಕ್ಯೂರಿಟಿಗಾರ್ಡ್ಗಳು ತಡೆದಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಲ್ಲಲಾಗಿದೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂರು-ನಾಲ್ಕು ಜನ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೆಕ್ಯೂರಿಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಎಷ್ಟು ಜನ ಬಲಿಯಾಗಿದ್ದಾರೆ ಎಂಬ ಬಗ್ಗೆ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.ಘಟನೆ ಬಳಿಕ ಈ ದುಷ್ಕರ್ಮಿಗಳು ಓಡಿಹೋಗಿದ್ದು, ಈ ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳದಲ್ಲಿ ಬಾಂಬ್ ದಾಳಿ ಕೂಡ ನಡೆದಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಸಿಂಧ್ ಪ್ರಾಂತ್ಯದ ಗವರ್ನರ್ ಇಮ್ರಾನ್ ಇಸ್ಮೈಲ್ ಈ ಕುರಿತು ಐಜಿಗೆ ವರದಿಯನ್ನು ಕೇಳಿದ್ದಾರೆ. ಈ ಕುರಿತು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಗಳಿಂದಲೂ ವರದಿ ಕೇಳಲಾಗಿದೆ.