ಮನೋಹರ್ ಪರಿಕ್ಕರ್ ರಾಜೀನಾಮೆ ನೀಡಲು ಮುಂದಾಗಿದ್ದರೂ ಹೈಕಮಾಂಡ್ ಅವಕಾಶ ನೀಡುತ್ತಿಲ್ಲ

ಪಣಜಿ: ಅನಾರೋಗ್ಯಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೂ ಹೈಕಮಾಂಡ್ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಗೋವಾದ ಸಚಿವರೊಬ್ಬರು ಬಾಂಬ್ ಸಿಡಿಸಿದ್ದಾರೆ.

ಗೋವಾದ ಕೃಷಿ ಸಚಿವ ಹಾಗೂ ಗೋವಾ ಫಾವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ ದೇಸಾಯಿ ಈ ಮಾಹಿತಿ ಹೊರಹಾಕಿದ್ದು, ಮನೋಹರ್ ಪರಿಕ್ಕರ್ ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಡಲು ಮುಂದಾಗಿದ್ದರು. ಅಲ್ಲದೆ ತಾವು ನಿರ್ವಹಿಸುತ್ತಿದ್ದ ಎಲ್ಲ ಖಾತೆಗಳನ್ನು ಬೇರೊಬ್ಬರು ನಿರ್ವಹಿಸಬೇಕಿದೆ ಎಂದಿದ್ದರು.

ಆದರೆ ಬಿಜೆಪಿಯವರು ಪರಿಕ್ಕರ್ ಅವರ ರಾಜೀನಾಮೆ ಪತ್ರ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ಆಡಳಿತ ಯಂತ್ರ ಸುಗಮವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಗಣೇಶದ ಹಬ್ಬದ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರು ಇದನ್ನು ಬಿಟ್ಟುಕೊಡಲು ಸಿದ್ದರಾಗಿದ್ದರು.

ನನ್ನ ಆರೋಗ್ಯ ಸುಧಾರಣೆಯಾಗುತ್ತಿಲ್ಲ. ನಾನು ಗೋವಾ ಜನತೆಗೆ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗದಿದ್ದಾಗ ಇದರಲ್ಲಿ ಮುಂದುವರೆಯುವುದು ನನಗೆ ಸರಿ ಎನಿಸುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲು ಸಾಕಷ್ಟು ಮಂದಿ ಇದ್ದಾರೆ. ಸಕ್ರಿಯ ರಾಜಕಾರಣ ನನಗೆ ಒಗ್ಗುತ್ತಿಲ್ಲವೆಂದು ಪರಿಕ್ಕರ್ ಹೇಳಿದ್ದರು ಎಂದು ದೇಸಾಯಿ ತಿಳಿಸಿದ್ದಾರೆ.

ಸದ್ಯ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿದ ಬಳಿಕ ನಾಯಕತ್ವ ಬದಲಾವಣೆ ಚಿತ್ರಣ ಸಿಗಲಿದೆ. ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Goa CM Manohar parikkar,Wanted To Quit,BJP Leadership

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ