ಇದೆ ನವೆಂಬರ್‌​​ ತಿಂಗಳಿನಲ್ಲಿ ಪೆಟ್ರೋಲ್​​-ಡೀಸೆಲ್​​ ಬೆಲೆ 4 ರೂನಷ್ಟು ಇಳಿಕೆ!

ಬೆಂಗಳೂರುಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಈ ಕಾರದಿಂದಲೇ ಮತ್ತೆ ಪೆಟ್ರೋಲ್‌ ದರ ನಿನ್ನೆ(ಶುಕ್ರವಾರ) ಲೀಟರ್‌ಗೆ 40 ಪೈಸೆ ಕಡಿಮೆಯಾಗಿದ್ದು, ಇದೀಗ ರೂ.76.17ಕ್ಕೆ ಇಳಿದಿದೆ. ಅಲ್ಲದೇ ನವೆಂಬರ್‌ ಆರಂಭದಿಂದ ಇಲ್ಲಿಯವರೆಗೂ ಪೆಟ್ರೋಲ್‌ ದರ 4 ರೂ, ಡೀಸೆಲ್‌ ದರ ಒಟ್ಟು ರೂ. 3.10 ಇಳಿಕೆಯಾಗಿದ್ದು, ವಾಹನ ಸವಾರರಿಗೆ ಸಿಹಿಸುದ್ದಿ ಸಿಕ್ಕಿದೆ ಎನ್ನಲಾಗಿದೆ.

ತೈಲ ಬೆಲೆ ಏರಿಕೆ ಹಾಗೂ ವ್ಯಾಟ್ ದರ ಇಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಾಂದ್ರೀಕಕೃತ ನೈಸರ್ಗಿದ ಅನಿಲದ (ಸಿಎನ್’ಜಿ) ಸಂಸ್ಥೆಗಳು ಪ್ರತಿಭಟನೆ ನಡೆಸಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಮುಖವಾಗುತ್ತಿದೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಇಳಿಕೆಯಾಗಿದೆ. ಹೀಗಾಗಿ ಕಳೆದ ಹಲವು ತಿಂಗಳಿನಿಂದ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಕೊಂಚ ನಿರಾಳ ದೊರಕಿದೆ.

ಈ ಹಿಂದೆಯೇ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 76.57 ಇದೆ. ಡೀಸೆಲ್‌ ದರ 71.35 ರೂ. ಇದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 75.97 ರೂ. ಮತ್ತು ಡೀಸೆಲ್‌ ದರ 70.97 ರೂ. ಆಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ರೂ. 3822ಕ್ಕೆ ತಲುಪಿದೆ ಎನ್ನಲಾಗಿತ್ತು.

90ಕ್ಕೇರಿದ್ದ ಪೆಟ್ರೋಲ್​​ ದರಎರಡು ತಿಂಗಳ ಹಿಂದೆ ಪೆಟ್ರೋಲ್​​-ಡೀಸೆಲ್​ ದರದಲ್ಲಿ ಭಾರೀ ಏರಿಕೆಯಾಗಿತ್ತು. ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ಅಧಿಕವಾಗಿತ್ತು. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.87 ರೂ.  ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 72.97 ರೂ.ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್​ಗೆ  88.26 ರೂ.  ಡೀಸೆಲ್​ಗೆ 77.47 ರೂ. ಅಧಿಕವಾಗಿದೆ. ಮಹಾರಾಷ್ಟ್ರದ ಪರ್ಬಾನಿ ನಗರದಲ್ಲಿ ಮಾತ್ರ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 90.05 ಆಗಿದೆ ಎನ್ನಲಾಗಿತ್ತು.

ಭಾರತ್ಬಂದ್​: ನಂತರ ತೈಲ ಬೆಲೆ ಏರಿಕೆ ವಿರೋಧಿಸಿ ವಿರೋಧ ಪಕ್ಷಗಳು ಭಾರತ್​ ಬಂದ್​ಗೆ ಕರೆ ನೀಡಿದ್ದವು. ಕಾಂಗ್ರೆಸ್ ಪಕ್ಷ ಕರೆಕೊಟ್ಟ ಭಾರತ್ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 21 ವಿಪಕ್ಷಗಳ ಬೆಂಬಲವಿದ್ದ ಈ ಬಂದ್​ ವೇಳೆ ಕೆಲ ಕಡೆ ಹಿಂಸಾಚಾರಗಳಾಗಿದ್ದವು. ಅನೇಕ ಕಡೆ ಟಯರ್ ಸುಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಹಲವೆಡೆ ಬಂದ್​ಗೆ ಓಗೊಟ್ಟು ಜನರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ಕರ್ನಾಟಕ, ಪಂಜಾಬ್, ಬಿಹಾರ, ಮಹಾರಾಷ್ಟ್ರ, ತ್ರಿಪುರಾ ರಾಜ್ಯಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿತ್ತು. ಇದರಿಂದ ಎಚ್ಚೆತ್ತ ಕೇಂದ್ರ ತೈಲ ದರದಲ್ಲಿ ಇಳಿಕೆ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ