
ನವದೆಹಲಿ: ಭಾರತದ ಬಾಕ್ಸಿಂಗ್ ದಂತಕತೆ ಮೇರಿ ಕೋಮ್ ನವದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನ ಸೋಲಿಸಿ ಫೈನಲ್ ತಲುಪಿದ್ದಾರೆ.
ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಿಮ್ ವಿರುದ್ಧ ಕಠಿಣ ಸವಾಲು ಎದುರಿಸಿ ಗೆದ್ದರು. ಇದರೊಂದಿಗೆ ವಿಶ್ವ ಕಿರೀಟ ಧರಿಸಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಗೆಲುವಿನ ನಂತರ ಮಾತನಾಡಿದ ಮೇರಿ ಕೋಮ್, ಕಳೆದ ವರ್ಷ ವಿಯೆಟ್ನಾಂನಲ್ಲಿ ನಡೆದ ಏಷ್ಯಾನ್ ಚಾಂಪಿಯನ್ಶಿಪ್ನಲ್ಲಿ ಕಿಮ್ ಅವರನ್ನ ಸೋಲಿಸಿದ್ದೆ. ನಾವು ಗೆಲ್ಲುತ್ತೇವೋ ಅಥವಾ ಸೋಲುತ್ತೇವೆ ಆದರೆ ನಮ್ಮ ವೀಕ್ನೆಸ್, ಸಾಮಥ್ರ್ಯವನ್ನ ಪರೀಕ್ಷಿಸಿಕೊಂಡು ಏನಾನನ್ನದರೂ ಕಲಿಯುತ್ತೇವೆ ಎಂದು ಹೇಳಿದ್ದಾರೆ.