ಮೊಹಮ್ಮದ್ ಶಹಜ್ಹಾದ್​  ಸಿಡಿಲಬ್ಬರದ ಬ್ಯಾಟಿಂಗ್ : ದಾಖಲೆಗಳು ಪೀಸ್ ಪೀಸ್…!

ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್​​ಮನ್ ಮೊಹಮ್ಮದ್ ಶಹಜ್ಹಾದ್​  ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ T10 ಲೀಗ್​ಗೆ​ ಭರ್ಜರಿ ಆರಂಭ ಸಿಕ್ಕಿದೆ.

ಸಿಂಧೀಸ್ ತಂಡದ ವಿರುದ್ಧದ ಪಂದ್ಯದಲ್ಲಿ ರನ್​ಹೊಳೆ ಹರಿದಿದೆ. ಕೇವಲ 16 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್​ ಮತ್ತು 6 ಬೌಂಡರಿ ಸಹಿತ, 76 ರನ್​ ಸಿಡಿಸಿದ್ರು. ಅಷ್ಟೇ ಅಲ್ಲ.. ಕೇವಲ 12 ಎಸೆತಗಳಲ್ಲೇ ಅರ್ಧಶತಕ ಸಹ ಪೂರೈಸಿದ್ರು. ಶಹಜ್ಹಾದ್​​​ರ ಈ ಅಬ್ಬರದ ಆಟದಿಂದಾಗಿ ರಜಪೂತ್​ ತಂಡ 95 ರನ್​​ಗಳ ಗುರಿಯನ್ನ, ಕೇವಲ 4 ಓವರ್​ಗಳಲ್ಲೇ ತಲುಪಿ 10 ವಿಕೆಟ್​ಗಳ ಅಮೋಘ ಜಯ ಸಾಧಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ