ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ: ನಿರ್ಧಾರ ಸಮರ್ಥಿಸಿಕೊಂಡ ರಾಜ್ಯಪಾಲ ಸತ್ಯಪಾಲ್

ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಮಾಡಿರುವ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿರುವ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಒಂದು ವೇಳೆ ಪಿಡಿಪಿ ಮುಖ್ಯಸ್ಥೆ ಮುಫ್ತಿ ಮೆಹಬೂಬಾ ಅವರು ಮಾಡಿದ್ದ ಫ್ಯಾಕ್ಸ್ ಪ್ರತಿ ತಮಗೆ ಸಿಕ್ಕಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಪಿಡಿಪಿ-ಎನ್ ಸಿ ಅಪವಿತ್ರ ಮೈತ್ರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಮುಫ್ತಿ ಮೆಹಬೂಬಾ ಅವರು ಸರ್ಕಾರ ರಚನೆಗಾಗಿ ಫಾಕ್ಸ್ ಮೂಲಕ ಕಳುಹಿಸಿದ್ದ ಹಕ್ಕು ಮಂಡನೆ ಪತ್ರ ತಮ್ಮ ಕೈ ಸೇರಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಶಾಸಕರ ಕುದುರೆ ವ್ಯಾಪರದ ಬಗ್ಗೆ ಮಾಹಿತಿ ಇತ್ತು:
ಇದೇ ವೇಳೆ ಕಳೆದ 15 ದಿನಗಳ ಹಿಂದೆಯೇ ಶಾಸಕರ ಕುದುರೆ ವ್ಯಾಪಾರದ ಕುರಿತು ನನಗೆ ಮಾಹಿತಿ ಬಂದಿತ್ತು. ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದವು. ಪ್ರಸ್ತುತ ಸರ್ಕಾರ ರಚನೆಗೆ ಹಕ್ಕೊತ್ತಾಯ ಮಾಡಿರುವ ಮೆಹಬೂಬಾ ಮುಫ್ತಿ ಅವರು ಶಾಸಕರಿಗೆ ಬರುತ್ತಿರುವ ಬೆದರಿಕೆ ಕುರಿತು ತಮಗೆ ದೂರು ನೀಡಿದ್ದರು.

ಅಂತೆಯೇ ನ್ಯಾಷನಲ್ ಕಾನ್ಱರೆನ್ಸ್ ಪಕ್ಷ ಶಾಸಕರಿಗೆ ಹಣ ನೀಡಿದ ಕುರಿತು ಮತ್ತು ಬೆದರಿಕೆ ತಂತ್ರಗಳ ಮೂಲಕ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿರುವ ಕುರಿತು ದೂರು ಬಂದಿತ್ತು. ಹೀಗಾಗಿ ಈ ಅಪವಿತ್ರ ಮೈತ್ರಿಗೆ ನಾನು ಆಸ್ಪದ ನೀಡದೇ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

ಮುಫ್ತಿ ಮೆಹಬೂಬಾ ಫ್ಯಾಕ್ಸ್ ಮಾಡುವ ಬದಲು ಒಂದು ದಿನ ಮುಂಚಿತವಾಗಿಯೇ ತಮ್ಮನ್ನು ಭೇಟಿ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.

jammu-kashmira,Governor satyapal Malik, justifies action

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ