
ಬೆಂಗಳೂರು,ನ.22- ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅಜಿತಾಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚೆನ್ನೈನ ಸಿಬಿಐ ಪೆÇಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಚೆನ್ನೈನ ಸಿಬಿಐ ಸ್ಪೆಷಲ್ ಕ್ರೈಮ್ ಬ್ರ್ಯಾಂಚ್ನಲ್ಲಿ ಎಫ್ಐರ್ ದಾಖಲಾಗಿರುವುದು ತಿಳಿದುಬಂದಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸಿಬಿಐ ಈ ಪ್ರಕರಣದ ತನಿಖೆಯ ಹೊಣೆ ಹೊತ್ತಿದೆ.
ಇದೂವರೆಗೂ ಸಿಐಡಿಯಿಂದ ಈ ಪ್ರಕರಣದ ತನಿಖೆ ನಡೆಯುತ್ತಿತ್ತು. ಆದರೆ ಸಿಐಡಿ ತನಿಖೆಯ ಪ್ರಗತಿ ಬಗ್ಗೆ ಅನುಮಾನಪಟ್ಟ ಅಜಿತಾಬ್ ಪೆÇೀಷಕರು ರಾಜ್ಯ ಹೈಕೋರ್ಟ್ನಲ್ಲಿ ಸಿಬಿಐನಿಂದ ತನಿಖೆಯಾಗಬೇಕೆಂದು ಮನವಿ ಮಾಡಿದ್ದರು.
ಇದನ್ನು ಪರಿಗಣಿಸಿದ ಉಚ್ಚನ್ಯಾಯಾಲಯವು ಕಳೆದ ತಿಂಗಳೇ ಸಿಬಿಐಗೆ ಈ ಪ್ರಕರಣವನ್ನು ವರ್ಗಾಯಿಸಿತ್ತು. ಇದೀಗ ಚೆನ್ನೈ ಬ್ರ್ಯಾಂಚ್ನಲ್ಲಿ ನ.20ರಂದು ಪ್ರಕರಣ ದಾಖಲಾಗುವುದರೊಂದಿಗೆ ಸಿಬಿಐನಿಂದ ಅಧಿಕೃತವಾಗಿ ತನಿಖೆ ಪ್ರಾರಂಭವಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಟೆಕ್ಕಿ ಅಜಿತಾಬ್ ಪ್ರಕರಣ ವೈಟ್ ಫೀಲ್ಡ್ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಸತತ 11 ತಿಂಗಳ ಕಾಲ ಅಜಿತಾಬ್ ಗಾಗಿ ಹುಡಕಾಟ ನಡೆಸಿದ್ದರು.ಅಲ್ಲದೇ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನೂ ಸಹ ರಚನೆ ಮಾಡಲಾಗಿತ್ತು.ಆದರೂ ಸಹ ಅಜಿತಾಬ್ ಬಗ್ಗೆ ಸಣ್ಣ ಸುಳಿವೂ ಬೆಂಗಳೂರು ಪೆÇಲೀಸರಿಗೆ ಸಿಕ್ಕಿರಲಿಲ್ಲ.
ಇದರಿಂದ ನೊಂದ ಅಜಿತಾಬ್ ಪೆÇೀಷಕರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರಿಗೂ ಪತ್ರ ಬರೆದಿದ್ದರು.ಹೀಗಾಗಿ ಕೋರ್ಟ್ ಆದೇಶದನ್ವಯ ಚೆನ್ನೈ ಸಿಬಿಐ ಬ್ರಾಂಚ್ ನಲ್ಲಿ ಅಜಿತಾಬ್ ನಾಪತ್ತೆ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನ ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಮ್ನಲ್ಲಿ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕುಮಾರ್ ಅಜಿತಾಬ್ ತನ್ನ ಸಿಯಾಜ್ ಕಾರ್ ಮಾರಾಟ ಸಂಬಂಧ ಓಎಲ್ಎಕ್ಸ್ನಲ್ಲಿ ಮಾಹಿತಿ ಹಾಕಿದ್ದರು.ಬಳಿಕ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷದ ಡಿ.18ರಂದು ಅವರ ಮೊಬೈಲ್ಗೆ ಕರೆ ಬಂದಿತ್ತು.ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಈ ಸಂಬಂಧ ಅವರ ಕುಟುಂಬಸ್ಥರು ದೂರು ದಾಖಲಿಸಿದ್ದರು.ವೈಟ್ಫೀಲ್ಡ್ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಇಷ್ಟು ದಿನವಾದರೂ ಕುಮಾರ್ ಅಜಿತಾಬ್ ಸಿಗಲಿಲ್ಲ. ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಅವರು ಹೈಕೋರ್ಟ್ ಮೊರೆಹೋದರು.
ಒಎಲ್ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು.
ಆಗ ಪೆÇಲೀಸರು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಿದ್ದರು.ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೆÇಲೀಸರು ಹುಡುಕಾಟ ಪ್ರಾರಂಭಿಸಿದ್ದರು.
8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿತ್ತು.ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸಿದ್ದರು.
ವೈಟ್ ಫಿಲ್ಡ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು.ನಂತರ ಪೆÇೀಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಅಕ್ಟೋಬರ್ 22ರಂದು ಉಚ್ಚನ್ಯಾಯಾಲಯವು ಸಿಬಿಐ ತನಿಖೆಗೆ ಪ್ರಕರಣ ವಹಿಸಿ ಆದೇಶಿಸಿತ್ತು.ಅದಾಗಿ ಒಂದು ತಿಂಗಳ ಬಳಿಕ ಚೆನ್ನೈನ ಸಿಬಿಐ ಬ್ರ್ಯಾಂಚ್ನಲ್ಲಿ ಎಫ್ಐಆರ್ ದಾಖಲಾಗಿದೆ.