ಅಮೃತಸರ ರೈಲು ದುರಂತ: ನಾಗರಿಕರ ಅಜಾಗರೂಕತೆಯೇ ಕಾರಣವೆಂದ ವರದಿ

ನವದೆಹಲಿ: 60 ಜನರನ್ನು ಬಲಿಪಡೆದ ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷವೇ ಕಾರಣ ಎಂದು ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ವರದಿ ನೀಡಿದ್ದಾರೆ.

ವಿಜಯದಶಮಿ ದಿನದಂದು ಪಂಜಾಬ್​ನ ಅಮೃತಸರದ ಚೌರಾ ಬಜಾರ್​ ಬಳಿ ನಡೆಯುತ್ತಿದ್ದ ದಸರಾ ಉತ್ಸವದ ವೇಳೆ ಜನಸಮೂಹದ ಮೇಲೆಯೇ ರೈಲು ಹರಿದ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತ ಎಸ್ ಕೆ ಪಾಠಕ್ ವರದಿ ನೀಡಿದ್ದು, ನಾಗರಿಕರ ಅಜಾಗರುಕತೆಯೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಾಠಕ್, ವಾಸ್ತವಿಕ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ನಾನು ಈ ವರದಿ ನೀಡಿದ್ದು, ಜನರ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳುಹಿಸದಿರಲು ಕೆಲವು ಶಿಫಾರಸುಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.

amritsar train accident,Railways report

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ