ಕಸ ವಿಲೇವಾರಿಯಲ್ಲಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮೇಯರ್ ಸೂಚನೆ

ಬೆಂಗಳೂರು,ನ.20-ಇನ್ನು ಮುಂದೆ ಕಸ ವಿಲೇವಾರಿಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮೇಯರ್ ಗಂಗಾಂಬಿಕೆ ಸೂಚನೆ ನೀಡಿದರು.

ಆಡಳಿತ ಪಕ್ಷದ ನಾಯಕ ಶಿವರಾಜ್, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಸಮ್ಮುಖದಲ್ಲಿ ಸಭೆ ನಡೆಸಿದ ಮೇಯರ್, ಕಸ ವಿಲೇವಾರಿಗೆ ಮೂಂದಿನ ತಿಂಗಳಿನಿಂದ ನೂತನ ಟೆಂಡರ್ ನೀತಿ ಜಾರಿಗೆ ತರಲಾಗುತ್ತಿದೆ. ಆನಂತರ ಗುತ್ತಿಗೆದಾರರು, ಅಧಿಕಾರಿಗಳು ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚಿಸಿ ಮೇಲಿನಂತೆ ಸೂಚನೆ ನೀಡಿದರು.

ವಾರ್ಡ್‍ಗೊಂದು ಕಸದ ಟೆಂಡರ್ ಕರೆಯಲಾಗುತ್ತಿದೆ. ಪ್ರತಿ ವಾರ್ಡ್‍ನಲ್ಲೂ ಪ್ರತಿಯೊಬ್ಬ ಗುತ್ತಿಗೆದಾರರು ಕಡ್ಡಾಯವಾಗಿ ಒಂದು ಕಾಂಪ್ಯಾಕ್ಟರ್ ಹಾಗೂ ಒಂದು ಹೊಸ ಆಟೋ ಹೊಂದಿರಬೇಕು ಜೊತೆಗೆ ಜಿಪಿಎಸ್ ಅಳವಡಿಸಿರಲೇಬೇಕು ಎಂದು ಸೂಚಿಸಿದರು.

ಗುತ್ತಿದಾರನಿಗೆ ಟೆಂಡರ್ ಕೊಡುವ ಮೊದಲು ಇದನ್ನೆಲ್ಲ ಪರಿಶೀಲಿಸಲಾಗುತ್ತದೆ.ಬೆಳಗ್ಗೇನೆ ಆಯಾಯ ವಾರ್ಡ್‍ಗಳಲ್ಲಿ ಸಂಪೂರ್ಣವಾಗಿ ಕಸ ವಿಲೇವಾರಿ ಆಗಿರಬೇಕು.ಎಲ್ಲ ವಾಡ್ ್ಗಳಲ್ಲೂ ಮಾರ್ಷಲ್‍ಗಳು ಇದನ್ನೆಲ್ಲ ಪರಿಶೀಲಿಸುತ್ತಾರೆ ಎಂದು ತಿಳಿಸಿದರು.
ಅಧಿಕಾರಿಗಳು ಶ್ರಮಪಟ್ಟು ನಗರಕ್ಕೆ ತಟ್ಟಿರುವ ಕಸದ ನಗರಿ ಎಂಬ ಕೆಟ್ಟ ಹೆಸರನ್ನು ಹೋಗಲಾಡಿಸಬೇಕು, ಸ್ವಚ್ಛನಗರ ಮಾಡಲು ಪಣ ತೊಡಬೇಕು ಎಂದು ಮೇಯರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ