ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಅಧಿಕಾರಕ್ಕೆ ಬರದಂತೆ ಪರ್ಯಾಯವಾಗಿ ಶಕ್ತಿಯನ್ನು ನಿರ್ಮಿಸುವುದೇ ನಮ್ಮ ಉದ್ದೇಶ : ಸಿಪಿಐ

ಬೆಂಗಳೂರು,ನ.20- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರದಂತೆ ರಾಜಕೀಯದ ಪರ್ಯಾಯವಾಗಿ ಶಕ್ತಿಯನ್ನು ನಿರ್ಮಿಸುವುದೇ 11ನೇ ಅಧಿವೇಶನದ ಉದ್ದೇಶವಾಗಿದೆ ಎಂದು ಸಿಪಿಐ(ಎಂಎಲ್)ನ ಅಧ್ಯಕ್ಷ ಡಿ.ಎಚ್.ಪೂಜಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 26ರಿಂದ ಡಿ.1ರವರೆಗೆ ಆರು ದಿನಗಳ ಕಾಲ ಸಮಾವೇಶ ನಡೆಯಲಿದ್ದು, 26ರಂದು ಮಧ್ಯಾಹ್ನ 12.30ಕ್ಕೆ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು 2.30ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆ ನಡೆಸಲಾಗುವುದು.

ನಂತರ 27ರಂದು ಮಾಗಡಿ ರಸ್ತೆಯ ಅಂಜನಾನಗರದ ಸ್ಫೂರ್ತಿಧಾಮದಲ್ಲಿ ಮಹಾಧಿವೇಶನ ಜರುಗಲಿದೆ. 28ರಂದು ಸಂಜೆ 4ರಿಂದ 8ರವರೆಗೆ ಇಂದಿನ ಸಾಮ್ರಾಜ್ಯಶಾಹಿ ವಿಷಯವಾಗಿ ಹಾಗೂ 29ರಂದು ಎಡಶಕ್ತಿಗಳ ಐಕ್ಯತೆಯ ಸವಾಲುಗಳು ಎಂಬ ವಿಷಯವಾಗಿ ವಿಚಾರಸಂಕಿರಣ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪರ್ಯಾಯವಾಗಿ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿ ಆಡಳಿತ ನಡೆಸಲು ಅನುವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದ್ದು, ಮಹಾಧಿವೇಶನದಲ್ಲಿ ಇಂತಹ ಶಕ್ತಿಗಳ ಒಗ್ಗೂಡುವಿಕೆಯನ್ನು ಉತ್ತೇಜಿಸಲಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ