ಹೋರಾಟದ ಹಾದಿ ಹಿಡಿದ ಸಂಕಷ್ಟಕ್ಕೆ ಒಳಗಾಗಿರುವ ರೈತರು

ಬೆಂಗಳೂರು,ನ.20- ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಲೇ ಕಬ್ಬು ಬೆಳೆದು ಸಂಕಷ್ಟಕ್ಕೊಳಗಾಗಿರುವ ರೈತರು ಇತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದಲೂ ಶೋಷಣೆಗೊಳಗಾಗಿ ಅಡಕತ್ತರಿಯಲ್ಲಿ ಸಿಲುಕಿ ಹೋರಾಟದ ಹಾದಿ ಹಿಡಿದಿದ್ದಾರೆ.
ಇವರ ಈ ಹೋರಾಟ ಸರ್ಕಾರದ ಬುಡವನ್ನೇ ಅಲುಗಾಡುವಂತೆ ಮಾಡಿದೆ. ನಿನ್ನೆಯಷ್ಟೇ ರಾಜಧಾನಿಗೂ ಲಗ್ಗೆ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ಗಡುವು ನೀಡಿದ್ದಾರೆ. ಆದರೆ ಅವರ ಅಳಲಿಗೆ ಕಾರಣ ಮಾತ್ರ ಸಣ್ಣದಲ್ಲ.

ಕಬ್ಬು ಬೆಳೆಗಾರರು ಒಂದು ಕಡೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಿದ್ದಾರೆ, ಮತ್ತೊಂದು ಕಡೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಿರುವ ಬಿಲ್ ಬಾಕಿ ಹಣ ಕೊಡದೆ ಸತಾಯಿಸುತ್ತಾ ಬಂದಿವೆ. ಇದರಿಂದ ರೈತರು ದಿಕ್ಕು ತೋಚದೆ ಹತಾಶೆಗೊಂಡು ಕೊನೆಗೆ ಪ್ರತಿಭಟನೆಗೆ ಮುಂದಾಗಿದ್ದರು.
ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಲ್ಲಿರುವ ಸಚಿವರು, ಶಾಸಕರು, ಮಾಜಿ ಸಚಿವರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದಿಂದ ಕೋಟ್ಯಂತರ ಹಣವನ್ನು ರೈತರಿಗೆ ಕೊಡದೆ ಬಾಕಿ ಉಳಿಸಿಕೊಂಡಿವೆ.

ರಾಜ್ಯದಲ್ಲಿ ಯಾವುದೇ ಪಕ್ಷ, ಯಾರೇ ಮುಖ್ಯಮಂತ್ರಿಯಾದರೂ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಈ ಕಾರ್ಖಾನೆ ಮಾಲೀಕರನ್ನು ಯಾರೂ ಕೂಡ ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಒಂದು ರೀತಿ ಕೊಬ್ಬಿದ ಬಿಳಿಯಾನೆಯಂತಾಗಿರುವ ಇವರನ್ನು ಅಲುಗಾಡಿಸಲು ಅಷ್ಟು ಸುಲಭವಲ್ಲ.
ಹೀಗಾಗಿಯೇ ಯಾವುದೇ ಸರ್ಕಾರ ಬಂದರೂ ತಲೆಕೆಡಿಸಿಕೊಳ್ಳದೆ ಮಾಲೀಕರು ರೈತರ ಜೊತೆ ಚೆಲ್ಲಾಟ ಆಡುತ್ತಲೇ ಇರುತ್ತಾರೆ.ಅನ್ನದಾತನಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಿದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿತ್ತ ಎಂಬ ಮೂಲ ಪ್ರಶ್ನೆ ಈಗ ಎದುರಾಗಿದೆ.

ಎಲ್ಲ ಪಕ್ಷಗಳಲ್ಲೂ ಸಕ್ಕರೆ ಮಾಲೀಕರೇ ಇರುವುದರಿಂದ ಬಹುತೇಕರಿಗೆ ಇವರನ್ನು ಎದುರು ಹಾಕಿಕೊಳ್ಳುವ ಉಸಾಬರಿಗೂ ಕೈ ಹಾಕುತ್ತಿಲ್ಲ. ಉದಾ: ಜಾರಕಿಹೊಳಿ ಸಹೋದರರ ವಿರುದ್ದ ಸರ್ಕಾರವೇನಾದರೂ ಕ್ರಮ ಕೈಗೊಳ್ಳಲು ಮುಂದಾದರೆ ದೋಸ್ತಿ ಸರ್ಕಾರ ತಳಪಾಯಕ್ಕೆ ಧಕ್ಕೆಯಾಗುತ್ತಿದೆ.
ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಮಾಲೀಕರು ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಸರ್ಕಾರದ ಉದಾಸೀನತೆ ಹಾಗೂ ನಮ್ಮನ್ನು ಯಾರೂ ಏನೂ ಮಾಡಲಾರರು ಎಂಬ ಅಹಂಕಾರದಿಂದಲೇ ಈ ಪರಿಸ್ಥಿತಿ ಉದ್ಭವವಾಗಿದೆ.
ಯಾವ್ಯಾವ ಸಕ್ಕರೆ ಕಾರ್ಖಾನೆಗಳು ಎಷ್ಟೆಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಗಲಕೋಟೆಯ ಸಕ್ಕರೆ ಕಾರ್ಖಾನೆಗಳು
ಬಾಗಲಕೋಟೆ ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್‍ಗೆ ರೂ 310ರಂತೆ 2016-17 ಹಾಗೂ 2017-18 ನೇ ಸಾಲಿನಲ್ಲಿ ಒಟ್ಟು 28542 ಕೋಟಿ ಬಾಕಿ ಬಿಲ್ ಇದೆ.
1) ಗೋದಾವರಿ ಸಕ್ಕರೆ ಕಾರ್ಖಾನೆ, ಸಮೀರವಾಡಿ-(ಸಮೀರ್ ಸೋಮಯ್ಯ, ಉದ್ದಿಮೆದಾರ, ಮಾಲೀಕತ್ವ,ಬಾಂಬೆ) -2016-17ನೇ ಸಾಲಿನಲ್ಲಿ ಪಾವತಿಸಿದೆ – 2017-18 ನೇ ಸಾಲಿನಲ್ಲಿ 35.18 ಕೋಟಿ ಬಾಕಿ
2) ಮುಧೋಳ ನಿರಾಣಿ ಸಕ್ಕರೆ ಕಾರ್ಖಾನೆ (ಶಾಸಕ ಮುರುಗೇಶ್ ನಿರಾಣಿ ಮಾಲಿಕತ್ವ)- 2016-17ನೇ ಸಾಲಿನಲ್ಲಿ 17.65 ಕೋಟಿ, 2017-18ನೇ ಸಾಲಿನಲ್ಲಿ 28.12 ಕೋಟಿ.
3) ಜಮಖಂಡಿ ಶುಗರ್ಸ್ ಕಾರ್ಖಾನೆ (ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವ) 2016-17ನೇ ಸಾಲಿನಲ್ಲಿ ಪಾವತಿಸಿದೆ; 2017-18 ನೇ ಸಾಲಿನಲ್ಲಿ 17.46ಕೋಟಿ ಬಾಕಿ
4) ಪ್ರಭುಲಿಂಗೇಶ್ವರ ಶುಗರ್ಸ್, ಸಿದ್ದಾಪುರ-(ರಾಜಕಾರಣಿ ಜಗದೀಶ್ ಗುಡಗುಂಟಿ ಮಾಲೀಕತ್ವ)-2016-17ನೇ ಸಾಲಿನಲ್ಲಿ-19.52, 2017-18 ನೇ ಸಾಲಿನಲ್ಲಿ 24.83 ಕೋಟಿ..
5) ಜೆಮ್ ಶುಗರ್ಸ್ ,ಕುಂದರಗಿ(ಜವಾಹರಲಾಲ್ ದೊಡ್ಡನ್ನವರ, ಉದ್ದಿಮೆದಾರ),2016-17ನೇ ಸಾಲಿನಲ್ಲಿ 12.31, 2017-18 ನೇ ಸಾಲಿನ ಲ್ಲಿ-18.90ಕೋಟಿ.
6) ರನ್ನ ರೈತ ಸಹಕಾರಿ ಸಕ್ಕರೆ ಕಾರ್ಖಾನೆ,-(ರಾಮಣ್ಣ ತಳೇವಾಡ ಅಧ್ಯಕ್ಷ,ರಾಜಕಾರಣಿ)-2016-17 ನೇ 2.88,ಕೋಟಿ ,2017-18 ನೇ ಸಾಲಿನಲ್ಲಿ 7.73ಕೋಟಿ.
7) ಐಸಿಪಿಎಲ್ ಉತ್ತೂರು-(ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವ):-2016-17 ನೇ ಸಾಲಿನಲ್ಲಿ ಪಾವತಿಸಿದೆ,2017-18ನೇ ಸಾಲಿನಲ್ಲಿ 18.18ಕೋಟಿ..
8) ಸಾವರಿನ್ ಸಕ್ಕರೆ ಕಾರ್ಖಾನೆ-(ರಾಜಕಾರಣಿ ಶಿವಕುಮಾರ್ ಮಲಘಾಣ ಮಾಲೀಕತ್ವ );-2016-17ನೇ ಸಾಲಿನಲ್ಲಿ ಪಾವತಿಸಿದ,2017-18ನೇ ಸಾಲಿನಲ್ಲಿ 9.08ಕೋಟಿ.
9)ಬೀಳಗಿ ಶುಗರ್ಸ್,ಬಾಡಗಂಡಿ(ಮಾಜಿ ಸಚಿವ ಎಸ್ ಆರ್ ಪಾಟೀಲ್ ಮಾಲೀಕತ್ವ)-,2016-17 ನೇ ಸಾಲಿನಲ್ಲಿ ಪಾವತಿಸಿದೆ.2017-18ನೇ ಸಾಲಿನಲ್ಲಿ 9.72ಕೋಟಿ..
10) ಸದಾಶಿವ ಶುಗರ್ಸ್ ಕಾರ್ಖಾನೆ,ನಾಯನೇಗಲಿ( ಎಂ ಎಂ ಮುರಗಪ್ಪನ್ ,ಉದ್ದಿಮೆದಾರ,ಮಾಲೀಕತ್ವ)-2016-17ನೇ ಸಾಲಿನಲ್ಲಿ 13.88ಕೋಟಿ,2017-18ನೇ ಸಾಲಿನಲ್ಲಿ ಪಾವತಿಸಿದೆ.
11) ಸಾಯಿಪ್ರಿಯಾ , ಹಿಪ್ಪರಗಿ(ಶಾಸಕ ಮುರುಗೇಶ್ ನಿರಾಣಿ ಮಾಲೀಕತ್ವ)-2016-17ನೇ ಸಾಲಿನಲ್ಲಿ ಪಾವತಿಸಿದೆ. 2017-18ನೇ ಸಾಲಿನಲ್ಲಿ ಬಾಕಿ 11.09 ಕೋಟಿ ಬಾಕಿ.
ಬೆಳಗಾವಿ ಜಿಲ್ಲೆ ಸಕ್ಕರೆ ಕಾರ್ಖಾನೆಗಳಿಂದ ಉಳಿದಿರುವ ಬಾಕಿ:
1) ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ. ಕೆ. ಹುಬ್ಬಳ್ಳಿ- 18.60 ಕೋಟಿ
2) ಶ್ರೀ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ, ಹಿರೇನಂದಿಹಳ್ಳಿ, ಗೋಕಾಕ ತಾಲೂಕು-20.00 ಕೋಟಿ.- ಮಾಲೀಕರು ಸಚಿವ ರಮೇಶ ಜಾರಕಿಹೊಳಿ
3) ಸತೀಶ ಶುಗರ್ಸ್, ಪಿ. ಜಿ. ಹುಣಶ್ಯಾಳ- 30.00 ಕೋಟಿ- ಸತೀಶ್ ಜಾರಕಿಹೊಳಿ ಶಾಸಕ
4) ಬೆಳಗಾವಿ ಶುಗರ್ಸ್, ಹುದಲಿ- 12.00 ಕೋಟಿ. – ಮಾಲೀಕರು ಸತೀಶ್ ಜಾರಕಿಹೊಳಿ(ಶಾಸಕ)
5) ಶಿವಸಾಗರ ಅಗ್ರೊ, ಉದಪುಡಿ, ರಾಮದುರ್ಗ- 24.00ಕೋಟಿ.- ಖಾಸಗಿ
6)ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಗೋಕಾಕ-4.00ಕೋಟಿ.- ಸಹಕಾರಿ ಸಕ್ಕರೆ ಕಾರ್ಖಾನೆ- ಬಾಲಚಂದ್ರ ಜಾರಕಿಹೊಳಿ ಹಿಡತದಲ್ಲಿರುವ ಇರೋ ಕಾರ್ಖಾನೆ
7) ರೇಣುಕಾ ಶುಗರ್ಸ್ ಮುನವಳ್ಳಿ- 10.00ಕೋಟಿ- ಉದ್ಯಮಿ ವಿದ್ಯಾ ಮುರುಕುಂಬಿ ಒಡೆತನದ ಕಾರ್ಖಾನೆ
8) ಸಮೀರವಾಡಿ ಸಕ್ಕರೆ ಕಾರ್ಖಾನೆ, ಸೈದಾಪುರ- 10.00ಕೋಟಿ.- ಖಾಸಗಿ
9)ವಿಶ್ವನಾಥ ಶುಗರ್ಸ್, ಬೆಲ್ಲದಬಾಗೇವಾಡಿ- 15.00ಕೋಟಿ.- ಉಮೇಶ ಕತ್ತಿ, ಬಿಜೆಪಿ ಶಾಸಕ
10) ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಕೇಶ್ವರ-10.00ಕೋಟಿ.- ಸಹಕಾರಿ
11) ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿ- 8.00ಕೋಟಿ.- ಖಾಸಗಿ
12) ಲೈಲಾ ಶುಗರ್ಸ್, ಖಾನಾಪುರ-6.00ಕೋಟಿ.- ವಿಠ್ಠಲ್ ಹಲೇಗರಕ್ ಬಿಜೆಪಿ ಮುಖಂಡ
13)ಪ್ಯಾರಿ ಶುಗರ್ಸ್, ರಾಮದುರ್ಗ-15.00ಕೋಟಿ.-ಖಾಸಗಿ
14)ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಬೈಲಹೊಂಗಲ- 13.00ಕೋಟಿ.- ಖಾಸಗಿ
15)ಇಂಡಿಯನ್ ಕೇನ್ ಪವರ್ ಲಿ. ಉತ್ತೂರು, ಯಾದವಾಡ-40.00 ಕೋಟಿ- ಖಾಸಗಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ