ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆ ಪಿ ಶಶಿಕಲಾಗೆ ಅಯ್ಯಪ್ಪ ದರ್ಶನಕ್ಕೆ ಷರತ್ತುಬದ್ಧ ಅವಕಾಶ

ತಿರುವನಂತಪುರಂ: ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆ ಪಿ ಶಶಿಕಲಾ ಅವರಿಗೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹಿಂದೂಪರ ನಾಯಕರು ಮತ್ತು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಸು ತ್ತಿರುವ ಪ್ರತಿಭಟನೆ ತಾರಕಕ್ಕೇರಿರು ಬೆನ್ನಲ್ಲೇ ಇತ್ತ ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಮತ್ತು ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆ ಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಅಯ್ಯಪ್ಪ ದರ್ಶನಕ್ಕೆ ದರ್ಶನಕ್ಕೆ 6 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

ಶಶಿಕಲಾ ಅವರು 6 ಗಂಟೆಗಳೊಳಗೆ ಶಬರಿಮಲೆ ಸನ್ನಿಧಾನಂ ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವಂತೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಈಗಾಗಲೇ ಶಬರಿಮಲೆಯತ್ತ ಹೊರಟಿರಿವ ಶಶಿಕಲಾ, ಪೊಲೀಸರು ನೀಡಿರುವ ಅನುಮತಿ ಪತ್ರವನ್ನು ಬಸ್ಸಿನಲ್ಲಿ ಕುಳಿತು ಮಾಧ್ಯಮಗಳಿಗೆ ಪ್ರದರ್ಶಿಸಿದರು. ಕೆ ಪಿ ಶಶಿಕಲಾ ಅವರೊಂದಿಗೆ ಅವರ ಮೊಮ್ಮಗ ಕೂಡ ಸನ್ನಿಧಾನಂ ನತ್ತ ತೆರಳುತ್ತಿದ್ದು, ಸನ್ನಿಧಾನಂ ನಲ್ಲಿಯೇ ತಮ್ಮ ಮೊಮ್ಮಗನಿಗೆ ಶಶಿಕಲಾ ಅವರು ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಶಬರಿಮಲೆಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ರೀತಿ ಅಹಿತಕರ ಘಟನೆಗಳು ಜರುಗದಂತೆ ಕಟ್ತೆಚ್ಚರ ವಹಿಸಿದ್ದಾರೆ.

‘Don’t block devotees, return in 6 hours’: Kerala cops let KP Sasikala visit Sabarimala

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ