ಗೆಲುವಿನ ನಾಗಲೋಟ ಮುಂದುವರೆಸಿದ ಮಿಥಾಲಿ ಪಡೆ

ಗಯಾನಾ: ಸ್ಮøತಿ ಮಂದಾನ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಅನುಜಾ ಪಾಟೀಲ್ ಅವರ ಮಾರಕ ದಾಳಿಯ ನೆರವಿನಿಂದ ಮಿಥಾಲಿ ಪಡೆ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಮಹಿಳಾ ಟಿ20 ಟೂರ್ನಿಯಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿ ಸೆಮಿಫೈನಲ್ ತಲುಪಿತು.
ಗಯಾನಾ ಅಂಗಳದಲ್ಲಿ ನಡೆದ ರೋಚಕ ಟಿ20 ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ಸ್ಮøತಿ ಮಂದಾನ (83) ಅವರ ಅರ್ಧ ಶತಕದ ನೆರವಿನಿಂದ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ನಾಯಕಿ ಹರ್ಮನ್‍ಪ್ರೀತ್ ಕೌರ್ 43 ರನ್ ಗಳಿಸಿದ್ರು. ಆಸೀಸ್ ಪರ ಪೆರ್ರಿ 3 ವಿಕೆಟ್ ಪಡೆದು ಮಿಂಚಿದ್ರು.
168 ರನ್‍ಗಳ ಸವಾಲನ್ನ ಬೆನ್ನತ್ತಿದ ಆಸೀಸ್ 19.4 ಓವರ್‍ಗಳಲ್ಲಿ 119 ರನ್‍ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಆಲ್‍ರೌಂಡರ್ ಎಲೆಸ್ಸಿ ಪೆರ್ರಿ 39 ರನ್‍ಗಳಿಸಿದರು. ಭಾರತ ಪರ ದೀಪ್ತಿ ಶರ್ಮ, ರಾಧಾ ಯಾದವ್ ಪೂನಮ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಅನುಜಾ ಪಾಟೀಲ್ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ