ಯಾವ ತಂಡಗಳು ವಿದೇಶದಲ್ಲಿ ಚೆನ್ನಾಗಿ ಆಡುತ್ತಿಲ್ಲ: ಕೋಚ್ ರವಿ ಶಾಸ್ತ್ರಿ

ವಿದೇಶದಲ್ಲಿ ಟೀಂ ಇಂಡಿಯ ಇನ್ನು ಕಳಪೆ ಪ್ರದರ್ಶನದಿಂದ ಹೊರ ಬರಬೇಕಿದೆ ಆದರೆ ಕೋಚ್ ರವಿ ಶಾಸ್ತ್ರಿ ವಿಭಿನ್ನವಿವಾಗಿ ಹೇಳಿಕೆ ಕೊಟ್ಟು ತಮ್ಮ ಬೆನ್ನನ್ನ ತಾವೆ ತಟ್ಟಿಕೊಂಡಿದ್ದಾರೆ.
ವಿದೇಶದಲ್ಲಿ ಟೀಂ ಇಂಡಿಯಾ ಪ್ರದರ್ಶನ ಕುರಿತು ಮಾತನಾಡಿರುವ ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಇಂದು ಬಹುತೇಕ ಎಲ್ಲ ತಂಡಗಳು ವಿದೇಶಗಳಲ್ಲಿ ಕಳಪೆ ಆಟ ಆಡುತ್ತವೆ. ಒಂದು ತಂಡವನ್ನ ಯಾಕೆ ಗುರಿ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಆಸೀಸ್ ಸರಣಿ ಕುರಿತು ನೀವು ನಿಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು. ವಿದೇಶಕ್ಕೆ ಹೋದಾಗ ಅಲ್ಲಿ ಬೇರೆ ತಂಡಗಳು ಕೊಟ್ಟ ಪ್ರದರ್ಶನ ಗಮನಿಸಿ ಎಂದಿದ್ದರೆ.
ಆಸ್ಟ್ರೇಲಿಯಾ ತಂಡ 90ರ ಮತ್ತು ಶತಮಾನ ಬದಲಾಗುವ ಸಂದರ್ಭದಲ್ಲಿ ಚೆನ್ನಾಗಿ ಆಡಿತ್ತು. ದಕ್ಷಿಣ ಆಫ್ರಿಕಾ ತಂಡ ತಕ್ಕಮಟ್ಟಿಗೆ ಪ್ರದರ್ಶನ ನೀಡಿತ್ತು. ಕಳೆದ ಐದಾರು ವರ್ಷಗಳಿಂದ ಯಾವ ತಂಡಗಳು ವಿದೇಶದಲ್ಲಿ ಚೆನ್ನಾಗಿ ಆಡಿವೆ ಎಂದು ಹೇಳಿ. ಬರೀ ಟೀಂ ಇಂಡಿಯಾವನ್ನ ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಕೇಳಿದ್ದಾರೆ.
ನಾವು ದಕ್ಷಿಣ ಆಫ್ರಿಕಾ ಮತ್ತು ಆಂಗ್ಲರ ವಿರುದ್ಧ ದೊಡ್ಡ ಸಂದರ್ಭಗಳನ್ನ ಎದುರಿಸುವಲ್ಲಿ ಎಡವಿದ್ದೇವೆ. ಇದು ನಮ್ಮನ್ನ ಸೋಲುವಂತೆ ಮಾಡಿದೆ.ಆದರೆ ನಮ್ಮ ತಂಡದ ಸ್ಕೋರ್ ಎಲ್ಲವನ್ನ ಹೇಳುತ್ತೆ. ಇದರ ಬಗ್ಗೆ ನಾನು ತಂಡದೊಂದಿಗೆ ಮಾತನಾಡಿದ್ದೇನೆ ಎಂದು ರವಿ ಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ