ಇಡಿ ನೂತನ ನಿರ್ದೇಶಕರಾಗಿ ಸಂಜಯ್ ಕುಮಾರ್ ಮಿಶ್ರಾ ನೇಮಕ

ನವದೆಹಲಿ: ಜಾರಿ ನಿರ್ದೇಶನಾಲಯದ ನೂತನ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ದೆಹಲಿಯ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರಾಗಿದ್ದ ಸಂಜಯ್ ಮಿಶ್ರಾ ಅವರು ಬಳಿಕ ಅಕ್ಟೋಬರ್ 27ರಂದು ಮೂರು ತಿಂಗಳ ಅವಧಿಗೆ ಜಾರಿ ನಿರ್ದೇಶನಾಲಯಕ್ಕೆ ಹಂಗಾಮಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಅವರನ್ನು ಪೂರ್ಣಾವಧಿಗೆ ಇಡಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ನೇಮಕಾತಿ ಸಮಿತಿ (ಎಸಿಸಿ) ಮಿಶ್ರಾ ಅವರನ್ನು ನೇಮಕ ಮಾಡಿ, ಆದೇಶ ಹೊರಡಿಸಿದೆ. ಮುಂದಿನ ಎರಡು ವರ್ಷಗಳವರೆಗೆ ಮಿಶ್ರಾ ಇಡಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಂಜಯ್ ಕುಮಾರ್ ಮಿಶ್ರಾ ಅವರು ಭಾರತೀಯ ಕಂದಾಯ ಸೇವೆಯ (ಐಆರ್ ಎಸ್) 1984 ಬ್ಯಾಚ್, ಆಧಾರ ತೆರಿಗೆ ಕೇಡರ್​ನ ಅಧಿಕಾರಿಯಾಗಿದ್ದು, ಎನ್ ಡಿಟಿವಿ ಪ್ರಕರಣ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣಗಳ ತನಿಖೆಯಲ್ಲಿ ಮಿಶ್ರಾ ಅವರು ಬಹು ಮಹತ್ವದ ಪಾತ್ರ ವಹಿಸಿದ್ದರು.

Sanjay Kumar Mishra, Appointed As Full-Time Chief Of Enforcement Directorate

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ