ನವದೆಹಲಿ: ಜಾಹೀರಾತು ಗುರು ಎಂದೇ ಖ್ಯಾತಿ ಪಡೆದಿರುವ ಖ್ಯಾರ ರಂಗಭೂಮಿ ತಜ್ನ ಆಲಿಕ್ ಪದಮ್ಸೀ (90) ಯವರು ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.
ಜಾಹೀರಾತು ಕಂಪನಿ ಲಿಂಟಾಸ್ ಬಾಂಬೆಗೆ ನೇತೃತ್ವ ವಹಿಸಿ ಮುಂದೆ ಭಾರತೀಯ ಜಾಹೀರಾತುಗಳ ಪಿತಾಮಹ ಎಂದೇ ಪ್ರಖ್ಯಾತಿ ಪಡೆದಿದ್ದರು. ಜಲಪಾತದಲ್ಲಿ ಲಿರಿಲ್ ಜೊತೆ ಬಾಲಕಿ, ಹಮಾರಾ ಬಜಾಜ್, ಕಾಮಸೂತ್ರದ ದಂಪತಿಗಳು ಇವು ಪದಮ್ಸೀ ಅವರು ಜಹೀರಾತು ಜಗತ್ತಿಗೆ ನೀಡಿರುವ ಕೊಡುಗೆಗಳಾಗಿವೆ.
ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ‘ಗಾಂಧಿ’ಯಲ್ಲಿ ಪದಮ್ಸೀಯವರ ಮುಹಮ್ಮದ್ ಅಲಿ ಜಿನ್ನಾ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ಮತ್ತು ನಿರ್ಮಾಪಕರಾಗಿ ಅಷ್ಟೇ ಅಲ್ಲದೆ, ರಂಗಭೂಮಿ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ಪದಮ್ಸೀ ಯವರ ಸಾಧೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 2000ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಟಾಗೋರ್ ರತ್ನ ಪ್ರಶಸ್ತಿಯನ್ನು ಸಹ ಅವರು ಪಡೆದುಕೊಂಡಿದ್ದಾರೆ.
ಆಲಿಕ್ ಪದಮ್ಸೀ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
Ad Guru And Actor Alyque Padamsee Dies At 90