
ಬೆಂಗಳೂರು,ನ.16- ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ಬಂಧನ ಖಂಡನೀಯ ಎಂದು ಖ್ಯಾತ ವಾಗ್ಮೀ ಹಾಗೂ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕಣಕಾರ ಸಂತೋಷ್ ತಮ್ಮಯ್ಯ ಅವರು ಮಂಡಿಸಿದ ವಿಚಾರ ಕುರಿತು ಅನಗತ್ಯ ವಿವಾದ ಎಬ್ಬಿಸಿ ಧರ್ಮ ನಿಂದನೆಯ ಪ್ರಕರಣ ದಾಖಲಿಸಿ ಅವರನ್ನು ಮಧ್ಯರಾತ್ರಿ ಬಂಧಿಸಿರುವುದು ಸರಿಯಲ್ಲ ಎಂದರು.
ಹಿಂದು ದೇವರು, ಧರ್ಮ, ಆಚರಣೆಗಳ ಬಗ್ಗೆ ಅತ್ಯಂತ ಹೀನಾಯವಾಗಿ ಮಾತನಾಡಿದವರ ಮೇಲೆ ಕೇಸು ದಾಖಲಿಸದೆ ಹಿಂದು ಧರ್ಮದ ಪರವಾಗಿ ಮಾತನಾಡಿದಕ್ಕೆ ಅವರನ್ನು ಮಧ್ಯರಾತ್ರಿ ಕಳ್ಳರಂತೆ ಬಂಧಿಸಿರುವುದು ಖಂಡನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಏನು ಮಾತನಾಡಿದರೂ, ಏನು ಬರೆದರೂ ಕೇಸು ದಾಖಲಾಗುತ್ತದೆ ಎನ್ನುವ ಭಯದಲ್ಲಿ ಹಿಂದೂಪರ ಚಿಂತಕರು, ಬರಹಗಾರರು ಇದ್ದಾರೆ ಎಂದು ವಿಷಾದಿಸಿದರು.
ಹೈಕೋರ್ಟ್ ವಕೀಲ ಉಮಾಶಂಕರ್ ಮೇಗುಂದಿ, ನಿಲುಮೆ ಫೌಂಡೇಷನ್ ಸಂಚಾಲಕ ರಾಕೇಶ್ ಶೆಟ್ಟಿ , ಜೈ ಭಾರ್ಗವ ಬಳಗದ ಸಂಚಾಲಕ ಅಜೀತ್ ಶೆಟ್ಟಿ, ಹೈಕೋರ್ಟ್ ವಕೀಲ ದೀಪಕ್ ಶೆಟ್ಟಿ , ರಾಜಧಾನಿ ಕಂಬಳ ಕ್ರಿಯಾ ಸಮಿತಿಯ ಅಜಿತ್ ಹೆರಾಂಜೆ ಮುಂತಾದವರು ಇದ್ದರು.