ಪಕ್ಷ ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದ ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು, ನ.16- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರೂಪಿಸಿರುವ ಶಕ್ತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಪಕ್ಷ ಸಂಘಟನೆಯನ್ನು ಬಲಪಡಿಸಬೇಕು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಕರೆ ನೀಡಿದರು.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಏರ್ಪಡಿಸಿದ್ದ ಶಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕ್ತಿ ಪ್ರತಿಯೊಬ್ಬರ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಬೇಕು. ದೇಶದ ಪ್ರತಿಯೊಬ್ಬ ಮತದಾರನಿಗೂ ಕಾಂಗ್ರೆಸ್‍ನ ಜನಪರ ಕಾರ್ಯಕ್ರಮಗಳನ್ನು ತಲುಪಿಸಿ, ಜನರ ಸಮಸ್ಯೆಗಳನ್ನು ಆಲಿಸಿ ಅವರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಆರು ದಶಕಗಳ ಕಾಲ ದೇಶವನ್ನು ಆಳಿದೆ. ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುವಂತೆ ಮಾಡಿರುವುದು ಕಾಂಗ್ರೆಸ್ ಪಕ್ಷ. ಈ ಪಕ್ಷ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಶಕ್ತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಹೆಸರನ್ನು ನೊಂದಾಯಿಸಿ ಇತರರನ್ನೂ ಈ ಕಾರ್ಯಕ್ರಮಕ್ಕೆ ಸೇರಿಸಿ ಪಕ್ಷವನ್ನು ಬಲಗೊಳಿಸಲಿದೆ ಎಂದು ಅವರು ಕರೆ ನೀಡಿದರು.

ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ದನ್ ಮುಂತಾದವರು ಮಾತನಾಡಿ, ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಶಕ್ತಿ ಅನಾವರಣಗೊಂಡಿದೆ. ದೇಶಾದ್ಯಂತ ಜಾತ್ಯತೀತ ಶಕ್ತಿಗಳು ಒಂದುಗೂಡಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು ಎಂದು ಹೇಳಿದರು.

ಸಲೀಂ, ಪರಿಸರ ರಾಮಕೃಷ್ಣ, ಹೇಮರಾಜ್, ಶೇಖರ್ ಮುಂತಾದವರು ಭಾಗವಹಿಸಿದ್ದರು.
ಮತ್ತೆ ಹಿರಿಯ ಅಧಿಕಾರಿಗಳ ವಗಾ೵ವಣೆ:
ಬೆಂಗಳೂರು, ನ.16- ಮತ್ತೆ ಅಧಿಕಾರಿಗಳ ಎತ್ತಂಗಡಿ ಪರ್ವ ಆರಂಭಗೊಂಡಿದ್ದು, ಎಂಟು ಮಂದಿ ಹಿರಿಯ ಐಎಫ್‍ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ನಿಯುಕ್ತಿಗೊಂಡ ಸ್ಥಳ ಈ ಕೆಳಕಂಡಂತಿದೆ.
ದಿಲೀಪ್‍ಕುಮಾರ್ ದಾಸ್: ಎಪಿಸಿಸಿಎಫ್- ಜಲಸಂಪನ್ಮೂಲ ಇಲಾಖೆಯ ಅರಣ್ಯ ವಿಭಾಗ.
ಮಹೇಶ್ ಬಿ.ಶಿರೂರ್: ಎಪಿಸಿಸಿಎಫ್ ನಿರ್ದೇಶಕರು, ಪರಿಸರ ನಿರ್ವ ಹಣಾ ಮತ್ತು ಯೋಜನಾ ಸಂಶೋಧನಾ ಸಂಸ್ಥೆ, ಬೆಂಗಳೂರು.
ಸ್ಮಿತಾ ಬಿಜೂರ್: ಎಪಿಸಿಸಿಎಫ್ ಮುಖ್ಯ ಮೌಲ್ಯಾಧಿಕಾರಿ, ಕೆಇಯು.
ಶಾಂತಕುಮಾರ್: ಎಪಿಸಿಸಿಎಫ್ ಪ್ರಧಾನ ಕಾರ್ಯದರ್ಶಿ, ಅರಣ್ಯ-ಪರಿಸರ ಇಲಾಖೆ.
ಶ್ರೀಕಾಂತ್ ವಿ.ಹೊಸೂರ್: ಎಪಿಸಿಸಿಎಫ್ ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ.
ವನಶ್ರೀ ವಿಪಿನ್‍ಸಿಂಗ್: ಸಿಸಿಎಫ್, ಬೆಂಗಳೂರು.
ಡಾ.ಕೆ.ಎಚ್.ವಿನಯ್‍ಕುಮಾರ್: ಸಿಸಿಎಫ್, ಅರಣ್ಯ ಸಂಪನ್ಮೂಲ ನಿರ್ವಹಣೆ, ಬೆಂಗಳೂರು.
ಉಪೇಂದ್ರ ಪ್ರತಾಪ್‍ಸಿಂಗ್: ಸಿಸಿಎಫ್ ಮತ್ತು ಆಯುಕ್ತರು, ಪಶು ಸಂಗೋಪನಾ ಸೇವಾ ವಿಭಾಗ, ಬೆಂಗಳೂರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ