ಬೆಂಗಳೂರು, ನ.16-ಅಪಾಯಕಾರಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆಗಾಗಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯು ಜೆಮಿನಿ ರೈಲ್ ಬ್ರಾನ್ ಆಯಿಲ್ನನ್ನು(ಭತ್ತದ ತೌಡು ಎಣ್ಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇಂದಿನ ಆಧುನಿಕ ಜಗತ್ತಿನ ಒತ್ತಡದಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಮನುಷ್ಯರ ಆರೋಗ್ಯಕ್ಕೆ ಅಪಾಯ ತಂದೊಡ್ಡಿವೆ. ದಿಢೀರ್ ಆಹಾರ ಸೇವನೆಯಿಂದ ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಪಾಶ್ರ್ವವಾಯು, ಹೃದಯಾಘಾತ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.
ಜೊತೆಗೆ ನಾವು ಬಳಸುವ ಖಾದ್ಯ ತೈಲಗಳಲ್ಲಿ ಅಧಿಕ ಕೊಬ್ಬಿನ ಅಂಶಗಳಿಂದಾಗಿ ಹಾನಿಕಾರಕ ಕೊಲೆಸ್ಟ್ರಾಲ್ ಪ್ರಮಾಣವೂ ಹೆಚ್ಚಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯು ಜೆಮಿನಿ ಭತ್ತದ ಹೊಟ್ಟು ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇತರ ಖಾದ್ಯ ತೈಲಗಳಿಗೆ ಹೋಲಿಸಿದಲ್ಲಿ ಜೆಮಿನಿ ರೈಸ್ ಬ್ರಾನ್ ಆಯಿಲ್ ಹೆಚ್ಚು ಸುರಕ್ಷಿತ. ಇದರಲ್ಲಿ ಶೇ.40ಕ್ಕಿಂತಲೂ ಅಧಿಕ ಪ್ರಮಾಣದ ಓರಿಝಾನಲ್ ಇರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ಅನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಇದನ್ನು ಕೊಲೆಸ್ಟ್ರಾಲ್ ಕಟ್ಟರ್ ಎಂದೇ ಪರಿಗಣಿಸಲಾಗಿದೆ.
ಜನರು ಬಳಸುವ ಆಹಾರದ ಮೂಲಕ ದೇಹದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ ಸುದೀರ್ಘ ಸಂಶೋಧನೆ ನಂತರ ಅಭಿವೃದ್ದಿಗೊಳಿಸಿರುವ ಈ ತೈಲವು ಉತ್ಕರ್ಷಣ ಪ್ರತಿರೋಧಕ (ಆಂಟಿ-ಆಕ್ಸದಂಟ್) ಗುಣಗಳನ್ನು ಹೊಂದಿದ್ದು, ವಿಟಮಿನ್ ಎ. ಡಿ ಮತ್ತು ಇ ಜೀವಸತ್ವಗಳೊಂದಿಗೆ ಸಮೃದ್ಧವಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
1 ಲೀಟರ್, 5 ಲೀಟರ್ ಮತ್ತು ಟಿನ್ ಪ್ಯಾಕ್ಗಳಲ್ಲಿ ಜೆಮಿನಿ ರೈಸ್ ಬ್ರಾನ್ ಆಯಿಲ್ ಮಾರುಕಟ್ಟೆಗಳಲ್ಲಿ ಲಭ್ಯ.
ಮಾಜಿ ಸಚಿವ ಜನಾದನ ರೆಡ್ಡಿಯವರಿಂದ ಬಿಜೆಪಿ ನಾಯಕರು ಯಾವ ರೀತಿ ಲಾಭ ಪಡೆದಿದ್ದಾರೆ ಎಂದು ಕೇಳಿದ ಜೆಡಿಎಸ್ ವಕ್ತಾರ ರಮೇಶ್ ಬಾಬು:
ಬೆಂಗಳೂರು, ನ.16- ಮಾಜಿ ಸಚಿವ ಜನಾರ್ದನರೆಡ್ಡಿ ಪರ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಂದ ಯಾವ ರೀತಿ ಲಾಭ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಜೆಡಿಎಸ್ ವಕ್ತಾರ ರಮೇಶ್ಬಾಬು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜನಾರ್ದನರೆಡ್ಡಿ ಅವರಿಂದ ಬಿಜೆಪಿ ನಾಯಕರು ಹಣದ ರೂಪದ ಸಹಾಯ ಪಡೆದಿರುವ ಸಾಧ್ಯತೆ ಇದೆ. ಇದನ್ನು ಖಚಿತ ಪಡಿಸಿದರೆ ಅದರ ಬಗ್ಗೆ ತನಿಖೆ ನಡೆಸುವಂತೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜನಾರ್ಧನರೆಡ್ಡಿ ಅವರು ಮೊದಲು ನಾಲ್ಕು ವರ್ಷ ಜೈಲಿನಲ್ಲಿದ್ದು ಬಂದಿದ್ದಾರೆ. ಬಳ್ಳಾರಿಗೆ ಕಾಲಿಡದಂತೆ ನಿರ್ಬಂಧ ಹೇರಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ದ್ವೇಷದ ರಾಜಕಾರಣ ಮಾಡುತ್ತಿರುವುದಾಗಿ ಜನಾರ್ದನರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಇದು ಸರಿಯಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಜನಾರ್ದನರೆಡ್ಡಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ. ಇದರ ಬಗ್ಗೆ ಸ್ಪಷ್ಟಪಡಿಸಬೇಕೆಂದು ಅವರು ಒತ್ತಾಯಿಸಿದರು.
ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮೊದಲು ಬಿಜೆಪಿಯವರು ಜನಾರ್ದನರೆಡ್ಡಿ ಅವರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲಿ. ಅಲ್ಲದೆ ರೆಡ್ಡಿ ಕೂಡ ಉದ್ದಟತನವನ್ನು ಬಿಡಬೇಕೆಂದು ಆಗ್ರಹಿಸಿದರು.
ತಮಗೆ ತಾವು ಪುಣ್ಯಕೋಟಿ ಎಂದು ಬಣ್ಣಿಸಿಕೊಂಡು ಅದರ ಕಥೆ ಹೇಳುತ್ತಾರೆ. ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನಿಜವಾದ ಪುಣ್ಯಕೋಟಿ ಎಂದರೆ ಅದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದರು.
ಸರ್ಕಾರಕ್ಕೆ ಬದ್ಧತೆ ಇದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ. ಆ್ಯಂಬಿಡೆಂಟ್ ಕಂಪೆನಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಜನತೆಗೆ ಸುಲಭವಾಗಿ ಕೆಲಸಗಳು ಕೈಗೆಟುಕುವ ನಿಟ್ಟಿನಲ್ಲಿ ಕಾವೇರಿ ಆನ್ಲೈನ್ ಸೇವೆ:
ಬೆಂಗಳೂರು, ನ.16- ನೋಂದಣಿ ಮುದ್ರಾಂಕ ಇಲಾಖೆಯ ಕೆಲಸಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟಕುವ ನಿಟ್ಟಿನಲ್ಲಿ ಕಾವೇರಿ ಆನ್ಲೈನ್ ಸೇವೆ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ಆನ್ಲೈನ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರ ನೋಂದಣಿ, ನೋಂದಾಯಿಸಿದ ಪತ್ರಗಳ ಭದ್ರತೆಯನ್ನು ಇಲಾಖೆ ನಿರ್ವಹಿಸುತ್ತದೆ. ಸಾರ್ವಜನಿಕರು ನೋಂದಣಿಗೆ ಸಂಬಂಧಿಸಿದ ಕೆಲಸವನ್ನು ಕಚೇರಿಗೆ ಬಂದು ಮಾಡಿಸಲು ಆಗುವ ಅನಾನುಕೂಲ ತಪ್ಪಿಸಲು ಆನ್ಲೈನ್ ಸೇವೆ ಮೂಲಕವೇ ಒಂದೇ ಹಂತದ ಪರ್ಯಾಯ ಸೌಲಭ್ಯ ಕಲ್ಪಿಸಲಾಗಿದ್ದು, ಮೈತ್ರಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲು ಈ ಯೋಜನೆ ಹೆಚ್ಚು ಫಲಪ್ರದವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ ಪಾತ್ರವೂ ಪ್ರಮುಖವಾಗಿದ್ದು, ಸೆಲ್ಗಳನ್ನು ಸ್ಥಾಪಿಸಿ ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಜನರಿಗೆ ಸೌಲಭ್ಯ ಒದಗಿಸಲು ಇ-ಸೇವೆ ಅನುಕೂಲಕರವಾಗಲಿದೆ. ಆ ಉದ್ದೇಶದಿಂದಲೇ ಇದನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸ್ಥಿರಾಸ್ತಿಗಳ ಋಣಬಾರ, ಪ್ರಮಾಣ ಪತ್ರ ನೋಂದಣಿ ಇನ್ನಿತರ ಕೆಲಸಗಳಿಗೆ ಮೊದಲೇ ಸಮಾಯವಕಾಶ ಪಡೆದು ಆನ್ಲೈನ್ ಮೂಲಕವೇ ಅಗತ್ಯ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಒಂಭತ್ತು ಸೇವೆಗಳನ್ನು ಒಳಗೊಂಡಿರುವ ಕಾವೇರಿ ಆನ್ಲೈನ್ ಸೇವೆ ಪಾರದರ್ಶಕ ವ್ಯವಸ್ಥೆ ಒಳಗೊಂಡಿದೆ ಎಂದು ವಿವರಿಸಿದರು.
ಆನ್ಲೈನ್ ಮೂಲಕವೇ ಆಸ್ತಿ ನೋಂದಣಿ ಮತ್ತಿತರ ದಾಖಲೆಗಳ ವಿವರವನ್ನು ಸಬ್ರಿಜಿಸ್ಟ್ರಾರ್ಗೆ ತಲುಪಿಸಿ ಖರೀದಿದಾರರು ಮತ್ತು ಮಾರಾಟಗಾರರ ನೋಂದಣಿಗೂ ಸಮಸ್ಯೆಯಾಗದಂತೆ ಈ ವ್ಯವಸ್ಥೆ ರೂಪುಗೊಂಡಿದೆ.
ಸಮಾರಂಭದಲ್ಲಿ ಮಾಜಿ ಸಚಿವ ಆರ್.ರೋಷನ್ ಬೇಗ್, ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಭೋಜೇಗೌಡ, ನೋಂದಣಿ ಮತ್ತು ಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತ ತ್ರಿಲೋಕ್ಚಂದ್ರ ಮತ್ತಿತರರು ತಿಳಿಸಿದರು.