ನಗರದ ಸಿ.ಎಂ.ಅರ್. ಕಾಲೇಜು ವಿದ್ಯಾರ್ಥಿಗಳಿಂದ ರೈತರ ಮಿತ್ರ ಆಪ್ ಆವಿಷ್ಕಾರ

ಬೆಂಗಳೂರು, ನ.16- ನಗರದ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಟೆಲಿಕಮ್ಯೂಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೈತರ ಮಿತ್ರ ಆಪನ್ನು ಆವಿಷ್ಕಾರಿಸಿದ್ದಾರೆ.

ರೋಗವಿರುವ ಸಸ್ಯ ಅಥವಾ ಬೆಳೆಯಯ ಛಾಯಾಚಿತ್ರವನ್ನು ರೈತ ತನ್ನ ಮೊಬೈಲ್ ಮೂಲಕ ಚಿತ್ರ ತೆಗೆದು ಅಪ್‍ಲೋಡ್ ಮಾಡಿದರೆ ಸಾಕು. ಈ ಆಪ್ ರೈತಅಪ್‍ಲೋಡ್ ಮಾಡಿದ ಚಿತ್ರವನ್ನು ಇಮೇಜ್ ಮುಖೇನ ಸಂಸ್ಕರಿಸಿ ರೋಗದ ಲಕ್ಷಣಗಳನ್ನಾಧರಿಸಿ ರೋಗದ ಹೆಸರು, ಅದಕ್ಕೆ ತಕ್ಕಔಷಧಿ, ಬಳಸಬೇಕಾದ ಪ್ರಮಾಣಗಳನ್ನು ನಿಗದಿತ ಅವಧಿಯಲ್ಲಿ ರೈತನ ಮೊಬೈಲ್‍ಗೆ ರವಾನಿಸುತ್ತದೆ.

ಇಷ್ಟೇ ಅಲ್ಲದೆ ಯಾವ ಕಾಲಕ್ಕೆ ಯಾವ ಬೆಳೆಯ ಫಸಲು ತಮ್ಮ ಭೂಮಿಯಲ್ಲಿ ಅಧಿಕ ಇಳುವರಿ ನೀಡುವುದು ಎನ್ನುವ ಮಾಹಿತಿಯನ್ನೂ ಸಹ ಇದು ಒದಗಿಸುತ್ತದೆ.
ಈ ಆಪ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಆಶಯ ಹೊಂದಿದೆ.
ಸದರಿಆಪ್‍ಅನ್ನು ಪ್ರೊಫ್.ಶ್ರುತಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾಹುಲ್, ರಕ್ಷಿತಗಣೇಶ್ ಭಟ್, ಪ್ರೇರಣಜೈನ್ ಮತ್ತು ಮನೋಜ ಅವರು ಅವಿಷ್ಕರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ