ಮಹಿಳಾ ವಿಶ್ವ ಟಿ20: ಸೆಮಿಫೈನಲ್ ಮೇಲೆ ಕಣ್ಣಿಟ್ಟ ಹರ್ಮನ್‍ಪ್ರೀತ್ ಪಡೆ

ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ ವನಿತೆಯರ ಕ್ರಿಕೆಟ್ ತಂಡ ಐಸಿಸಿ ಮಹಿಳಾ ವಿಶ್ವಕಪ್‍ನಲ್ಲಿ ಇಂದು ದುರ್ಬಲ್ ಐರ್ಲೆಂಡ್ ತಂಡವನ್ನ ಎದುರಿಸಲಿದೆ.
ಅಡಿರುವ ಎರಡು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಹರ್ಮನ್‍ಪ್ರೀತ್ ಪಡೆ ಐರ್ಲೆಂಡ್ ವಿರುದ್ಧ ಗೆದ್ದರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸಾಧನೆ ಮಾಡಲಿದೆ.
ಬೌಲಿಂಗ್ ಮತು ಬ್ಯಾಟಿಂಗ್ ಎರಡರಲ್ಲೂ ಒಳ್ಳೆಯ ಪ್ರದರ್ಶನ ನೀಡುತ್ತಿರೋದೇ ತಂಡದ ಯಶಸ್ಸಿಗೆ ಕಾರಣವಾಗಿದೆ. ನಾಯಕಿ ಹರ್ಮನ್ ಪ್ರೀತ್ ಒಳ್ಳೆಯ ಫಾರ್ಮ್‍ನಲ್ಲಿದ್ದು ತಂಡದ ಬ್ಯಾಟಿಂಗ್‍ನ ಆಧಾರ ಸ್ತಂಭವಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಹೇಮಲಾತಾ, ಪೂನಮ್ ಯಾದವ್ ಮತ್ತು ಅರುಂಧತಿ ರೆಡ್ಡಿ ಮಿಂಚುತ್ತಿದ್ದು ತಂಡದ ಬ್ಯಾಟ್ಸ್‍ಮನ್‍ಗಳಿಗೆ ನೆರವಾಗುತ್ತಿದ್ದಾರೆ. ಐರ್ಲೆಂಡ್ ವಿರುದ್ಧ ಇಂದು ಹರ್ಮನ್‍ಪ್ರೀತ್ ಪಡೆ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ