ವಾಷಿಂಗ್ಟನ್ : ಭಾರತೀಯ ಅಮೆರಿಕನ್ ಅಧಿಕಾರಿಗಳೊಡನೆ ಶ್ವೇತಭವನದಲ್ಲಿ ಮಂಗಳವಾರ ದೀಪಾವಳಿ ಆಚರಣೆಯಲ್ಲಿ ಭಾಗಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಅತ್ಯುತ್ತಮ ವಾಣಿಜ್ಯ ಸಂಧಾನಕಾರ ಎಂದು ಶ್ಲಾಘನೆ ಮಾಡಿದ್ದಾರೆ.
ಶ್ವೇತಭವನದಲ್ಲಿ ದೀಪಾವಳಿ ಆಚರಣೆ ನಡೆಸಿರುವುದು ಸಂತೋಷವಾಗಿದ್ದು, ಇದಕ್ಕಾಗಿ ಟ್ರಂಪ್ಗೆ ಪ್ರಧಾನಿ ಮೋದಿ ಧನ್ಯವಾದವನ್ನು ತಿಳಿಸಿದ್ದಾರೆ.
ಅಮೆರಿಕ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದೆ ಹಾಗೂ ಪ್ರಧಾನಿ ಮೋದಿ ಅವರ ಗೆಳೆತನಕ್ಕೆ ಧನ್ಯವಾದವನ್ನು ಅವರು ತಿಳಿಸಿದರು.
ಎರಡನೇ ಬಾರಿ ಶ್ವೇತಭವನದಲ್ಲಿ ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಹಬ್ಬದಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿದ ಅವರು, ಭಾರತದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ಹೊಂದಿದ್ದೇವೆ. ಅವರು ಉತ್ತಮ ವಾಣಿಜ್ಯ ವ್ಯಾಪಾರಿಗಳು ಹಾಗೂ ಸಂಧಾನಕಾರರು ಎಂದು ಎರಡು ರಾಷ್ಟ್ರದ ವ್ಯಾಪಾರ ಸಂಬಂಧ ಕುರಿತು ತಿಳಿಸಿದರು.
ಇನ್ನು ಈ ಸಂಭ್ರಮಕ್ಕೆ ಟ್ರಂಪ್ ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್ ಸಿಂಗ್ ಸರ್ನಾ ಮತ್ತು ಅವರ ಹೆಂಡತಿ ಡಾ ಅವಿನಾ ಸರ್ನಾ ಮತ್ತು ವಿಶೇಷ ಸಹಾಯಕ ಪ್ರತೀಕ್ ಮಥುರ್ ಅವರನ್ನು ಈ ವಿಶೇಷ ಸಂದರ್ಭದಲ್ಲಿ ಆಹ್ವಾನಿಸಿದ್ದರು.
ಟ್ರಂಪ್ ಅಧಿಕಾರದಲ್ಲಿ ಎರಡು ಡಜನ್ಗಿಂತ ಹೆಚ್ಚಿನ ಅಧಿಕಾರಿಗಳು ಆಡಳಿತ ನಿರ್ವಹಿಸುತ್ತಿದ್ದಾರೆ.