ಬೆಂಗಳೂರು, ನ.13-ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 8 ತಿಂಗಳ ಹಸುಗೂಸಿಗೆ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮಗು ಆರೋಗ್ಯವಾಗಿದೆ ಎಂದು ಸಾಗರ್ ಆಸ್ಪತ್ರೆಯ ವೈದ್ಯ ಡಾ.ಮುರುಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಹ ಹಾಗೂ ತಲೆ ಬುರುಡೆಯ ನಡುವಿನ ಸಂಪರ್ಕಕ್ಕೆ ಅಡಿ ಆಗಿ ತಲೆ ಬುರುಡೆ ಸರಿಯಾಗಿ ನಿಲ್ಲದಂತಹ ಪರಿಸ್ಥಿತಿಯನ್ನೊಡ್ಡುವ ಅಟ್ಲಾಂಟೋ ಆಕ್ಸಿಯಲ್ ಡಿನ್ಲೊಕೇಷನ್ (ಎಎಡಿ) ಎಂಬ ಅಪರೂಪದ ರೋಗಕ್ಕೆ ಮಗು ತುತ್ತಾಗಿದ್ದು, ಇದನ್ನು ಪತ್ತೆ ಹಚ್ಚಿ ನಮ್ಮ ಆಸ್ಪತ್ರೆ ನರರೋಗ ತಂಡ ನಡೆಸಿದ ಶಸ್ತ್ರ ಚಿಕಿತ್ಸೆಯ ಫಲವಾಗಿ ಇಂದು ಮಗು ಚೇತರಿಸಿಕೊಂಡು ಸಾಮಾನ್ಯರಂತೆ ಇರಲು ಸಾಧ್ಯವಾಗಿದೆ ಎಂದರು.
ಮೂಳೆಗಳು ಪೂರ್ತಿಯಾಗಿ ಬೆಳೆಯದ ಕಾರಣ ಗಾತ್ರದ ಇಂಪ್ಲಾಂಟ್ಸ್ಗಳನ್ನು ಹೊಂದಿರುವುದೂ ಸಹ ಕಷ್ಟಕರವಾಗಿತ್ತು. ಈ ಸ್ಥಿರತೆಯನ್ನು ಗಳಿಸಲು ಸರ್ಜನ್ ಹೊಸ ವಿಧಾನಗಳನ್ನು ಅನುಸರಿಸಬೇಕಾಯಿತು.ಈ ಗುರಿಯನ್ನು ಸಾಧಿಸಲು ಟೆಟೇನಿಯಮ್ ಸ್ಕ್ರ್ಯೂ ಮತ್ತು ಪ್ಲೇಟ್ಗಳನ್ನು ಬಳಸಲಾಯಿತು. ಇದೊಂದು ಅಪಾಯಕಾರಿ ಶಸ್ತ್ರ ಚಿಕಿತ್ಸೆಯಾಗಿದ್ದರೂ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ಶಿಶುವಿನ ಮೇಲೆ ನಡೆಸಿದ ಎಎಡಿ ಸರ್ಜರಿ ಇದಾಗಿದೆ ಎಂದರು ತಿಳಿಸಿದರು.
ಈ ಸರ್ಜರಿಯು ಒಂದು ಮೇಜರ್ ವಿಧಾನವಾಗಿದ್ದು, ಕೆಲವು ಗಂಟೆಗಳ ಸಮಯವನ್ನು ಇದು ತೆಗೆದುಕೊಂಡಿದೆ. ಸರ್ಜರಿಯು ಯಶಸ್ವಿಯಾಗಿದ್ದು, ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಈಗ ಒಂದು ವರ್ಷದ ನಂತರ ಮಗು ದೃಢಕಾಯವಾಗಿ ಜೀವನ ನಡೆಸುತ್ತಿದ್ದು, ಮಗುವಿನ ಆರೋಗ್ಯದ ಮೇಲೆ ಟ್ಯಾಬ್ ಇರಿಸಿದ್ದೇವೆ ಎಂದು ಹೇಳಿದರು.