ಮೀಟೂ ಬಾಂಬ್ ಸಿಡಿಸಿದ ನಟಿ ಹರ್ಷಿಕಾ ಪೂಣಚ್ಚ

ಬೆಂಗಳೂರು, ನ.11- ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ವಿರುದ್ಧ ಕಿಡಿಕಾರಿದ್ದ ನಟಿ ಹರ್ಷಿಕಾ ಪೂಣಚ್ಚ ಇದೀಗ ಮೀಟೂ ಬಾಂಬ್ ಸಿಡಿಸಿದ್ದಾರೆ.

ಹರ್ಷಿಕಾ ಪೂಣಚ್ಚ ಅವರು ತನಗೂ ಲೈಂಗಿಕ ಕಿರುಕುಳದ ಅನುಭವವಾಗಿದ್ದು ಅದಕ್ಕಾಗಿಯೇ ಬಾಲಿವುಡ್‍ನಿಂದ ಮರಳಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ರೀತಿಯ ಕಿರುಕುಳದಿಂದ ಬೇಸತ್ತ ಮಹಿಳೆಯರು ತಮ್ಮ ನೋವನ್ನು ಹಂಚಿಕೊಳ್ಳಲು ಮೀಟೂ ಅಭಿಯಾನ ಅತ್ಯಂತ ಸೂಕ್ತವಾದ ವೇದಿಕೆ. ಆದರೆ ಕೆಲವರು ಇದನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ