ಆರ್.ಕಲ್ಯಾಣಮ್ಮ ಅವರ ಕಲ್ಯಾಣ ಕಾರ್ಯಕ್ರಮಗಳ ಕುರಿತ ಉಪನ್ಯಾಸ

Varta Mitra News

ಬೆಂಗಳೂರು, ನ.11- ಹತ್ತೊಂಬತ್ತನೆ ಶತಮಾನದ ಧೀಮಂತ ಹಾಗೂ ಕ್ರಾಂತಿ ಮಹಿಳೆ ಆಗಿದ್ದ ಲೇಖಕಿ ಆರ್.ಕಲ್ಯಾಣಮ್ಮ ಅವರು ಸಮಾಜಕ್ಕಾಗಿ ಮುಖ್ಯವಾಗಿ ಮಕ್ಕಳು ಹಾಗೂ ಸ್ತ್ರೀಯರ ಏಳಿಗೆಗಾಗಿ ದುಡಿದಂತಹ ಮಹಾನ್ ಮಹಿಳೆಯಾಗಿದ್ದರು ಎಂದು ಸಾಹಿತಿ ಗೀತಾ ಗುಣಗಾನ ಮಾಡಿದರು.
ಕನ್ನಡ ಯುವಜನ ಸಂಘ ಹಮ್ಮಿಕೊಂಡಿದ್ದ ಆರ್.ಕಲ್ಯಾಣಮ್ಮ ಅವರ ಕಲ್ಯಾಣ ಕಾರ್ಯಕ್ರಮಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತಾನಡುತ್ತಾ, ಅವರ ಕಾವ್ಯನಾಮ ರಾಮಸ್ವಾಮಿ ಕಲ್ಯಾಣಮ್ಮ. ಶಾರದ ಸ್ತ್ರೀ ಸಮಾಜ ಸ್ಥಾಪಿಸಿದ ಇವರು 1938ರಲ್ಲಿ ಮಕ್ಕಳ ಕೂಟ ಸ್ಥಾಪಿಸಿದರು. ಅಲ್ಲದೆ ಪ್ರಿಯಂವದೆ, ನಿರ್ಭಾಗ್ಯವನಿತೆ, ಸುಖಾಂತ, ಭಕ್ತೆ ಮೀರಾ, ಮಾಧವಿ, ನಿರ್ಮಲಾ, ಪಂಚಕಜ್ಜಾಯ, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ, ಸತಿ ಪದ್ಮಿನಿ, ರಣಕೇಸರಿ, ಇಂದಿರೆ ಪ್ರಿಯಂವದೆ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆಂದು ಹೇಳಿದರು.

ಅವಿರತವಾಗಿ ದುಡಿದ ಕಲ್ಯಾಣಮ್ಮ ನಿಜವಾಗಿ ಹೇಳಬೇಕೆಂದರೆ ನಾಡು ಕಂಡಂಥ ಧೀಮಂತ ಹಾಗೂ ಆದರ್ಶ ಮಹಿಳೆ ಎಂದರೆ ತಪ್ಪಾಗಲಾರದು. ತಮ್ಮ ತಂದೆಯ ಉತ್ತೇಜನದಿಂದ ಲೋಯರ್ ಸೆಕೆಂಡರಿಯಲ್ಲಿ ಉತ್ತೀರ್ಣರಾದ ಕಲ್ಯಾಣಮ್ಮನವರು ಹಿರಿಯ ಸಾಹಿತಿಗಳ ಪೆÇ್ರೀ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.
1917ರಲ್ಲಿ ಸರಸ್ವತಿ ಎನ್ನುವ ಮಾಸ ಪತ್ರಿಕೆ ಪ್ರಾರಂಭಿಸಿ 42 ವರ್ಷ ಕಾಲ ನಡೆಯಿಸಿಕೊಂಡು ಬಂದು ಕಲ್ಯಾಣಮ್ಮನವರು 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮೊದಲ ಮಹಿಳಾ ಸದಸ್ಯೆಯಾಗಿದ್ದರು.

ಅದೇ ವರ್ಷ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. 400ಕ್ಕೂ ಹೆಚ್ಚು ಲೇಖನಗಳನ್ನು ಮಕ್ಕಳ ಸಾಹಿತ್ಯ, ವ್ಯಕ್ತಿ ಚಿತ್ರ, ಜೀವನ ಚರಿತ್ರೆ ಹಾಗೂ ಮುಂತಾದ ಹಲವು ಬರವಣಿಗೆಯಿಂದ ಅಮರರಾಗಿದ್ದಾರೆ.
ಗೀತಾರವರು ತಮ್ಮ ಉಪನ್ಯಾಸದಿಂದ ಸ್ವತಃ ನಮ್ಮನ್ನು ಅವರ ಕಾಲಕ್ಕೆ ತೆಗೆದುಕೊಂಡು ಹೋಗಿ ಒಂದು ಹೆಣ್ಣು ಅದು ಅಂತಕಾಲದಲ್ಲಿ ಇಂಥ ಸಾಧನೆ ಮಾಡಿದರೆಂದರೆ ಅದು ಒಂದು ಅದ್ಭುತಕ್ಕಿಂತ ಕಡಿಮೆಯಲ್ಲ ಎಂದು ಬಹಳ ಸೊಗಸಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಜಗದೀಶ್‍ರೆಡ್ಡಿ, ವಕೀಲ ಭದ್ರೇಗೌಡರು, ಹರಿದಾಸ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ