ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಗೆ ಭಾಗ್ಯನಗರ ಎಂದು ನಾಮಕರಣ: ಬಿಜೆಪಿ ಶಾಸಕ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ಘೋಷ ಮಹಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರಾಜಾಸಿಂಗ್, ಕೇವಲ ಹೈದರಾಬಾದ್ ಮಾತ್ರವಲ್ಲದೇ ಸಿಕಂದರಾಬಾದ್ ಮತ್ತು ಕರೀಮ್ ನಗರಗಳ ಹೆಸರನ್ನು ಬಿಜೆಪಿ ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.

ಹೈದರಾಬಾದ್ ಈ ಹಿಂದೆ ಭಾಗ್ಯನಗರವಾಗಿತ್ತು, 1590 ರಲ್ಲಿ ಕ್ವಿಲ್ ಕುತುಬ್ ಷಾ ಆಗಮಿಸಿ ಭಾಗ್ಯನಗರವನ್ನು ಹೈದಾರಾಬಾದ್ ಎಂಬುದಾಗಿ ಬದಲಾಯಿಸಿದ. ಆ ವೇಳೆ ಹಲವು ಹಿಂದುಗಳ ಮೇಲೆ ದಾಳಿ ನಡೆಯಿತು, ಹಲವು ದೇವಾಲಯಗಳು ನಾಶವಾದವು . ಹೀಗಾಗಿ ನಾವು ಹೈದರಾಬಾದ್ ಗೆ ಮರು ನಾಮಕರಣ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ಗೆ ಪುನರ್ ನಾಮಕರನ ಮಾಡುವುದಾಗಿ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ