ಬೆಂಗಳೂರು,ನ.9-ಮೂಡಬಿದರೆ ಆಳ್ವಾಸ್ ಶಿಕ್ರಂ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿ , ಕನ್ನಡ ನಾಡುನುಡಿ, ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವನ್ನು ನ.16ರಿಂದ 18ರವರೆಗೆ ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ದಾಮೋದರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ಸಹ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಏಳು ಸಭಾಂಗಣದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಮಲ್ಲಿಕಾ ಎಸ್.ಘಂಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಆಳ್ವಾಸ್ ವಿದ್ಯಾರ್ಥಿ ಸಿರಿ ಉದ್ಘಾಟನೆಗೊಳ್ಳಲಿದ್ದು, ಭವ್ಯ ಸಾಂಸ್ಕøತಿಕ ಮೆರವಣಿಗೆ, ನಾಲ್ಕು ಕವಿಗೋಷ್ಠಿಗಳು, ಆಳ್ವಾಸ್ ಕೃಷಿ ಸಿರಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಇದೇ ವೇಳೆ ಕುವೆಂಪು ಸಭಾಂಗಣದಲ್ಲಿ ಪ್ರಶಸ್ತಿ ಪಡೆದಂತಹ ಚಿತ್ರ ಪ್ರದರ್ಶನಗೊಳ್ಳಲಿದೆ.
16ರಂದು ಮಧ್ಯಾಹ್ನ 3ಕ್ಕೆ ಅಮ್ಮಚಿ ಎಂಬ ನೆನಪು(ಕುಂದ ಕನ್ನಡ), ಸಂಜೆ 5ಕ್ಕೆ ತಲಂಗ್ ನೀರ್(ಕೊಡವ), 17ರಂದು ಬೆಳಗ್ಗೆ 10ಕ್ಕೆ ಕಾಡಹಾದಿಯ ಹೂಗಳು, 3 ಗಂಟೆಗೆ ಶುದ್ಧಿ(ಕನ್ನಡ), ಸಂಜೆ 5.30ಕ್ಕೆ ಪಡ್ಡಾಯಿ(ತುಳು) ಹಾಗೂ 18ರಂದು ಸೋಫಿಯ ಎ ಪ್ರೀಮ್ ಗರ್ಲ್(ಕೊಂಕಣಿ), 3 ಗಂಟೆಗೆ ಹೆಬ್ಬೆಟ್ ರಾಮಕ್ಕ(ಕನ್ನಡ ಚಿತ್ರ) ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸಂಸದರು ನಳಿನಕುಮಾರ್ ಕಟೀಲ್, ಶಾಸಕ ಉಮಾನಾಥ್, ಕೋಟ್ಯಾನ್, ಮಾಜಿ ಸಚಿವ ಕೆ.ಅಭಯ್ಚಂದ್ರ ಜೈನ್ , ವಿಧಾನಪರಿಷತ್ ಸದಸ್ಯಯರಾದ ಭೋಜೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 12 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ನಗದು ಒಳಗೊಂಡಿದೆ ಎಂದು ವಿವರಿಸಿದರು.