![Gold And Silver Bars With Narendra Modi-atal ji](http://kannada.vartamitra.com/wp-content/uploads/2018/11/Gold-And-Silver-Bars-With-Narendra-Modi-atal-ji-678x380.jpg)
ಸೂರತ್: ಬೆಳಕಿನ ಹಬ್ಬ ದೀಪಾವಳಿ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತ್ರ ಹೊಂದಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳ ಖರೀದಿ ಗಮನ ಸೆಳೆಯುತ್ತಿವೆ.
ಆಭರಣ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಈ ವರ್ಷ ಚಿನ್ನದ ಗಟ್ಟಿ ಹಾಗೂ ನಾಣ್ಯಗಳ ಮೇಲೆ ಲಕ್ಷ್ಮೀ ಹಾಗೂ ಗಣೇಶನ ಬದಲು ನರೇಂದ್ರ ಮೋದಿ, ವಾಜಪೇಯಿ ಅವರ ಚಿತ್ರ ಮೂಡಿದೆ.
ಗ್ರಾಹಕರೊಬ್ಬರ ಪ್ರತಿಕ್ರಿಯೆ ಪ್ರಕಾರ, ನಮಗೆ ಮೋದಿ ಹಾಗೂ ವಾಜಪೇಯಿ ಕೂಡ ದೇವರಿದ್ದಂತೆ. ಹೀಗಾಗಿ ಇವರ ಭಾವಚಿತ್ರವಿರುವ ಬಂಗಾರದ್ದ ಗಟ್ಟಿಯನ್ನು ಈ ವರ್ಷ ಖರೀದಿಸಿ, ಪೂಜಿಸುವ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.
Jewellery shop,Surat,gold bars with PM Modi,atal bihari vajapai s