ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು ಭರದಿಂದ ಸಾಗಿದೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಬಿಜೆಪಿ ವಿರುದ್ಧ ಭಾರಿ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ರಾಮನಗರ, ಮಂಡ್ಯದಲ್ಲಿ ಜೆಡಿಎಸ್ ಅತ್ಯಂತ ದೊಡ್ಡ ಮತಗಳ ಅಂತರ ಸಾಧಿಸಿದೆ. ಇನ್ನು ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಭಾರಿ ಮತಗಳನ್ನು ಗಳಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ದೊಡ್ಡ ಅಂತರ ಕಾಯ್ದುಕೊಂಡಿದೆ. ಜಮಖಂಡಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಸಾಧಿಸಿದೆ.
ಇನ್ನು ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತುರುಸಿನ ಪೈಪೋಟಿ ನಡೆಯುತ್ತಿದೆ. ಆದರೂ, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ಮತಗಳ ಅಂತರ ಕ್ಷಣ ಕ್ಷಣವೂ ಹೆಚ್ಚುತ್ತಿದೆ.
ಈ ಬಾರಿಯ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮತದಾರರು ನೋಟಾ ಗೆ ಪ್ರಾಮುಖ್ಯತೆ ನೀಡಿದ್ದು, ಅದು ಕೂಡ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸುತ್ತಿದೆ.
ಸಧ್ಯದ ಮಾಹಿತಿ ಪ್ರಕಾರ:
ರಾಮನಗರ- ಜಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 27,998 ಮುನ್ನಡೆ
ಜೆಡಿಎಸ್- 33,859
ಬಿಜೆಪಿ – 5861
ಜಮಖಂಡಿ- ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ 12792 ಮುನ್ನಡೆ
ಕಾಂಗ್ರೆಸ್- 35218
ಬಿಜೆಪಿ – 22427
ಮಂಡ್ಯ- ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 109066 ಮತಗಳ ಭಾರಿ ಮುನ್ನಡೆ
ಜೆಡಿಎಸ್- 173290
‘ಬಿಜೆಪಿ – 64224
ಬಳ್ಳಾರಿ- ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 64000 ಮತಗಳಿಂದ ಮುನ್ನಡೆ
ಕಾಂಗ್ರೆಸ್- 150948
ಬಿಜೆಪಿ -86948
ಶಿವಮೊಗ್ಗ- ಬಿಜೆಪಿ ಅಭ್ಯರ್ಥಿ ರಾಘವೇಂದ್ರ 13481 ಮತಗಳ ಮುನ್ನಡೆ
ಬಿಜೆಪಿ – 144856
ಜೆಡಿಎಸ್- 128973