ಬೆಂಗಳೂರು,ನ.4- ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿ ಪ್ರತಿಷ್ಠಾನ ವತಿಯಿಂದ ಯೋಧರ ಬಗೆಗಿನ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಜನವರಿ ತಿಂಗಳಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧ್ವನಿ ಸುರುಳಿಯಲ್ಲಿ ದೇಶಭಕ್ತಿ, ತಾಯಿ ಹಾಗೂ ಯೋಧ ಮಗನ ಬಾಂಧವ್ಯ , ಸೈನಿಕ ಪತಿಯನ್ನು ಯುದ್ದಕ್ಕೆ ಕಳುಹಿಸಿ ವಿರಹ ವೇದನೆ ಅನುಭವಿವ ಪತ್ನಿಯ ಅಳಲು ಸೇರಿದಂತೆ ಯೋಧರ ಜೀವನದ ಹಲವು ಕೋನಗಳನ್ನು ಒಳಗೊಂಡ ಹಾಡುಗಳಿರುತ್ತವೆ ಎಂದು ತಿಳಿಸಿದರು.
ಲತಾ ಹಂಸಲೇಖ ಎಂ.ಡಿ.ಪಲ್ಲವಿ, ಮಂಗಳ ರವಿ, ಶ್ರೀರಕ್ಷಾ ಅರವಿಂದ ಶ್ವೇತ ಸೇರಿದಂತೆ ಹಲವಾರು ದಿಗ್ಗರು ಈ ಗೀತೆಗಳನ್ನು ಹಾಡಲಿದ್ದಾರೆ ಎಂದರು.
ಮೂಡಲ್ ಕುಣಿಗಲ್ ಕೆರೆ ಖ್ಯಾತಿಯ ರಾಮ್ ಪ್ರಸಾದ್ ಅವರ ರಾಗ ಸಂಯೋಜನೆಯಲ್ಲಿ ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ವಾದ್ಯ ಸಂಯೋಜನೆಯಲ್ಲಿ ಈ ಗೀತೆಗಳು ಅಮೋಘವಾಗಿ ಮೂಡಿಬರಲಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರನಟ ರಮೇಶ್, ಚಕ್ರವರ್ತಿ ಸೂಲಿಬೆಲೆ, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.