ಬೆಂಗಳೂರು,ನ.3- ಸೂಪರ್ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಅದ್ಧೂರಿ ಚಿತ್ರ 2.0 ಟ್ರೇಲರ್ನ್ನು ಇಂದು ಚೆನ್ನೈನ ಸತ್ಯಂ ಸಿನಿಮಾಸ್ನಲ್ಲಿ ಲಾಂಚ್ ಮಾಡಲಾಯಿತು.
ಅಲ್ಟ್ರಾಸೌಂಡ್ನ ವಿಶಿಷ್ಟ ರೆಕಾರ್ಡ್ ವರ್ಷನ್ನೊಂದಿಗೆ ನಿರ್ಮಾಣವಾಗಿರುವ ಈ ಸಿನಿಮಾ ಇದೇ 29ಕ್ಕೆ ಬಿಡುಗಡೆಗೊಳ್ಳುತ್ತಿದ್ದು,ಆಧುನಿಕ ತಾಂತ್ರಿಕತೆಯೊಂದಿಗೆ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವುದು ವಿಶೇಷ.
ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ರಜನೀಕಾಂತ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಆಧಾರಿತ ಈ ಸಿನಿಮಾ ಇಂದಿನ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಪೂರಕವಾಗುವಂತೆ ನಿರ್ಮಿಸಲಾಗಿದೆ ಎಂದು ಹೇಳಿದರು.
ವಿಶಿಷ್ಟತೆಗಳಿಂದ ಕೂಡಿರುವ ಸಿನಿಮಾ ತ್ರಿಡಿ ಎಕ್ಸ್ಪೆÇೀ ಕ್ವಾಲಿಟಿ ಹೊಂದಿದ್ದು, ಥಿಯೇಟರ್ನಲ್ಲೇ ಇದನ್ನು ನೋಡಬೇಕಿದೆ. ದಾಖಲೆ ಮಟ್ಟದಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಬಹಳಷ್ಟು ಅದ್ಧೂರಿಯಾಗಿರುವ ಸಿನಿಮಾ ವಿಶ್ವಾದ್ಯಂತ ಬಿಡುಗಡೆಗೊಳ್ಳುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
ನನ್ನ ಅನಾರೋಗ್ಯದಿಂದಾಗಿ ಚಿತ್ರ ಬೇಡ ಎಂದೇ ತಿಳಿಸಿದ್ದೆ. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರ ಒತ್ತಾಸೆಯಿಂದಾಗಿ ಇಂತಹ ಒಳ್ಳೆಯ ಚಿತ್ರದಲ್ಲಿ ಅಭಿನಯಿಸುವಂತಾಗಿದೆ ಎಂದು ಹೇಳಿದರು.
ಬಾಲಿವುಡ್ ನಟ ಅಕ್ಷಯ್ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ನಾಯಕಿಯಾಗಿ ಆ್ಯಮಿ ಜಾಕ್ಸನ್ ನಟಿಸುತ್ತಿದ್ದು, ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಎಂದಿರನ್ ಚಿತ್ರದ ಯಶಸ್ವಿ ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.