ತೀರ್ಥಹಳ್ಳಿ: ಬೆಳಿಗ್ಗೆ ಏಳು ಗಂಟೆಯಿಂದ ಉಪ ಚುನಾವಣೆ ಮತದಾನ ಆರಂಭವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ
ಮತಗಟ್ಟೆಯೊಂದನ್ನು ಹಸಿರು ಸೊಪ್ಪುಗಳಿಂದ ಅಲಂಕರಿಸಲಾಗಿದೆ.
ಮತದಾನದ ಜಾಗೃತಿಗಾಗಿ ಮತದಾರರನ್ನು ಆಕರ್ಷಿಸಲು ಮತಗಟ್ಟೆಯನ್ನು ವಿಶಿಷ್ಟವಾಗಿ ಹಸಿರು ಮತಗಟ್ಟೆಯಾಗಿ ಸಜ್ಜುಗೊಳಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಹುರುಳಿ ಮತಕೇಂದ್ರವನ್ನು ಸೊಪ್ಪುಗಳಿಂದ ಅಲಂಕರಿಸಲಾಗಿದೆ. ಅಲ್ಲದೆ, ಮತಗಟ್ಟೆಗೆ ಬರುವ ಮತದಾರರಿಗೆ ಬಿಸಿಲು ತಾಗದಂತೆ ಚಪ್ಪರ ಹಾಕಲಾಗಿದೆ.
ಪರಿಶಿಷ್ಟ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಹುರುಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಮತಗಟ್ಟೆಯ ಹೊರಗಡೆ ಚಪ್ಪರ ಹಾಕಲಾಗಿದ್ದು, ವರಾಂಡಕ್ಕೆ ಬೈನೆ ಮರದಸೊಪ್ಪಿನಿಂದ ಗೋಡೆ ನಿರ್ಮಿಸಲಾಗಿದೆ.
By electiona,shimoga constituencies, green-booth