Seen By:
62
ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹೆಸರಾದ ನಟ ಧನಂಜಯ್ ಇದೀಗ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ.
ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (ಆರ್ ಜಿವಿ) ಧನಂಜಯ್ ನಟನೆಯ ತಮ್ಮ ಚಿತ್ರ “ಭೈರವ ಗೀತಾ” ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತದೆ ಎನ್ನುವುದಾಗಿ ಘೋಷಿಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದ್ದಾರೆ.ಅಲ್ಲದೆ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಪ್ಡೇಟ್ ಮಾಡಿದ್ದಾರೆ.
ಚಿತ್ರ ನಾಲ್ಕು ಭಾಷೆಗಳಲ್ಲಿ ನವೆಂಬರ್ 22ಕ್ಕೆ ಚಿತ್ರ ತೆರೆ ಕಾಣಲಿದೆ.
ಧನಂಜಯ್ ಈ ಸಂಬಂಧ ಮಾತಣಡಿ “ಚಿತ್ರ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿರುವುದು ಸಂತಸದ ವಿಚಾರ. ಆದರೆ ಸ್ವತಃ ನಾನಿದನ್ನು ಯಾವ ರೀತಿ ಸ್ವೀಕರಿಸುವೆನೆನ್ನುವುದನ್ನು ನೋಡಬೇಕಿದೆ”
ರಾಮ್ ಗೋಪಾಲ್ ವರ್ಮ ಅವರ ಇನ್ನೊಂದು ಚಿತ್ರದಲ್ಲಿ ಸಹ ಧನಂಜಯ್ ನಟಿಸಲಿದ್ದಾರೆ. ಈ ಕುರಿತಂತೆ ಅವರೇ ಸುಳಿವು ನೀಡಿದ್ದು “ನನಗೆ ಅವರ ಮುಂದಿನ ಯೋಜನೆ ಕುರಿತು ತಿಳಿದಿಲ್ಲ. ಆದರೆ ಮಾತುಕತೆ ಪ್ರಗತಿಯಲ್ಲಿದೆ. ಭೈರವ ಗೀತಾ ಗೆ ಜನರ ಪ್ರತಿಕ್ರಿಯೆ ನೋಡಿದ ಬಳಿಕ ನನ್ನ ಮುಂದಿನ ದಾರಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವೆ.
“ನಾನು ಚಿತ್ರದ ಹೊಸ ಟ್ರೇಲರ್ ನೋಡಿದ್ದೇನೆ. ಚಿತ್ರದಲ್ಲಿನ ನನ್ನ ಅನಟನೆಗೆ ಹ್ಜನ ಮೆಚ್ಚುಗೆ ಸೂವ್ಚಿಸುತ್ತಾರೆ ಎಂದು ನಾನು ಖಚಿತವಾಗಿ ನಂಬುವೆನು” ಧನಂಜಯ್ ಹೇಳಿದ್ದಾರೆ.