ರೈಲಿನಲ್ಲಿ 1.62 ಕೋಟಿ ರೂ. ಪತ್ತೆ: ಮೂವರು ವಶಕ್ಕೆ

ಬೆಂಗಳೂರು, ನ.2- ಮುಂಬೈನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ರೈಲಿನಲ್ಲಿ 1.62 ಕೋಟಿ ರೂ. ಪತ್ತೆಯಾಗಿದ್ದು, ಈ ಸಂಬಂಧ ಉಡುಪಿ ಪೆÇಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂಲತಃ ರಾಜಸ್ಥಾನದ ಜಸ್ವಂತ್‍ಸಿಂಗ್ ಮತ್ತು ಪ್ರಕಾಶ್ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಗ್ರಾಮದ ಗಣೇಶ್ ಎಂಬುವರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಂಬೈನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಮೂವರು ವ್ಯಕ್ತಿಗಳು ಮೂರು ಬ್ಯಾಗ್‍ಗಳಲ್ಲಿ ಹಣ ತೆಗೆದುಕೊಂಡು ಪ್ರಯಾಣಿಸುತ್ತಿರುವ ಬಗ್ಗೆ ಉಡುಪಿ ಪೆÇಲೀಸರಿಗೆ ಖಚಿತ ಮಾಹಿತಿ ದೊರೆತಿದೆ.
ಈ ರೈಲು ಇಂದು ಬೆಳಗಿನ ಜಾವ 4.30ರಲ್ಲಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಉಡುಪಿ ಪೆÇಲೀಸರು ಕಾರ್ಯಪ್ರವೃತ್ತರಾಗಿ ರೈಲನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಆದಾಯ ತೆರಿಗೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ ಎಂದು ಉಡುಪಿ ಎಸ್‍ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹಣದ ಮೂಲದ ಬಗ್ಗೆ ಹಲವು ಮಾಹಿತಿಗಳನ್ನು ಈ ಮೂವರಿಂದ ಕಲೆ ಹಾಕುತ್ತಿದ್ದಾರೆ. ಈ ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂಬ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ವಶದಲ್ಲಿರುವ ಮೂವರು ವ್ಯಕ್ತಿಗಳು ಮೂರು ಬ್ಯಾಗ್‍ಗಳಲ್ಲಿ ಒಟ್ಟು 1.62 ಕೋಟಿ ರೂ. ಇದೆ ಎಂದು ಹೇಳಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಈ ಹಣವನ್ನು ಲೆಕ್ಕ ಮಾಡುತ್ತಿದ್ದು, ತದನಂತರವಷ್ಟೆ ಬ್ಯಾಗ್‍ಗಳಲ್ಲಿ ಎಷ್ಟು ಹಣವಿತ್ತು ಎಂಬುದು ನಿಖರವಾಗಿ ಗೊತ್ತಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ