ಬೆಂಗಳೂರು,ನ.2-ನಿರುದ್ಯೋಗಿ ಪದವೀಧರರಿಗೆ ಕೈಗಾರಿಕಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ಆಡಳಿತ ನಿರ್ವಹಣಾ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಗೆ ಐಬಿಎಸ್ ಬಿಸ್ನೆಸ್ ಶಾಲೆ ನೋಂದಣಿ ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಐಬಿಎಸ್ ಕ್ಯಾಂಪಸ್ ಮುಖ್ಯಸ್ಥ ಹಾಗೂ ನಿರ್ದೇಶಕ ಜಿ.ವಿ.ಮುರಳೀಧರ್ ಮಾತನಾಡಿ, ಸ್ನಾತಕೋತ್ತರ ಪವಿಯನ್ನು 1995ರಿಂದಲೇ ಆರಂಭಿಸಲಾಗಿದೆ. ಇದುವರೆಗೂ 22 ಬ್ಯಾಚ್ ಆಡಳಿತ ನಿರ್ವಹಣೆ ಪದವೀಧರರು ಯಶಸ್ವಿಯಾಗಿ ಸೇರ್ಪಡೆಯಾಗುವುದರೊಂದಿಗೆ ಸ್ವದೇಶ-ವಿದೇಶಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.
ಉದ್ಯೋಗವಕಾಶಕ್ಕಾಗಿ ಕಾಲೇಜಿನ ಕ್ಯಾಂಪಸ್ ಸೆಲೆಕ್ಷನ್ ಕೂಡ ಕೈಗೊಳ್ಳಲಾಗಿದೆ ಎಂದು ಎಂದರು.
ದೇಶದ 9 ರಾಜ್ಯಗಳಲ್ಲಿ ಐಬಿಎಸ್ ಪಿಜಿಪಿಎಂ(ಆಡಳಿತ ನಿರ್ವಹಣೆ) ಕೋರ್ಸ್ನ್ನು ಆರಂಭಿಸಿದೆ.
ಬೆಂಗಳೂರಿನ ಕ್ಯಾಂಪಸ್ನಲ್ಲಿ ಪ್ರತಿ ವಷ 600 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರವೇಶಕ್ಕಾಗಿ ಆಡಳಿತ ಮಂಡಳಿ ತನ್ನದೇ ಆದ ಉದ್ಯಾನವನ್ನು ಅನುಸರಿಸುತ್ತಿರುವುದಾಗಿ ತಿಳಿಸಿದರು.
ಪ್ರವೇಶ ಬಯಸುವ ಅಭ್ಯರ್ಥಿಗಳು ಯಾವುದಾದರೊದು ವಿಷಯದಲ್ಲಿ ಪದವೀಧರರಾಗಿರಬೇಕು, ಪ್ರವೇಶ ಪರೀಕ್ಷೆಗೆ ಐಬಿಎಸ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣವಾದ ನಂತರ ಸಂದರ್ಶನ ಇನ್ನಿತರ ಅಂಕಗಳು ಸೇರಿದಂತೆ ಒಟ್ಟು 4 ಹಂತಗಳಲ್ಲಿ ಪರೀಕ್ಷೆಗಳನ್ನ ನಡೆಸುವುದರೊಂದಿಗೆ ಪ್ರವೇಶ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ವೆಬ್ಸೈಟ್ ibisiಟಿಜiಚಿ.oಡಿg ನೋಂದಾಯಿಸಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8066222222 ಸಂಪರ್ಕಿಸಬಹುದಾಗಿದೆ.