ಮಾಹಿತಿಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಇ-ವಿಧಾನ ಯೋಜನೆ ಹೆಚ್ಚು ಅನುಕೂಲಕರ

Varta Mitra News

ಬೆಂಗಳೂರು, ನ.2-ಮಾಹಿತಿಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಇ-ವಿಧಾನ ಯೋಜನೆ ಹೆಚ್ಚು ಅನುಕೂಲಕರವಾಗಿದೆ. ಇದನ್ನು ಜಾರಿಗೆ ತರಲು ಅಧಿಕಾರಿ ವರ್ಗ ಶ್ರಮಿಸಬೇಕಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಡಿಜಿಟಲ್ ಇಂಡಿಯಾ ಯೋಜನೆಯಡಿ ವಿಧಾನಸಭೆ ಮತ್ತು ವಿಧಾನಪರಿಷತ್ ಸಚಿವಾಲಯದ ಸಿಬ್ಬಂದಿಗೆ ರಾಷ್ಟ್ರೀಯ ಇ-ವಿಧಾನ ಅಡಿಯಲ್ಲಿ ಏರ್ಪಡಿಸಲಾಗಿದ್ದ ಪುನರ್ ಮನನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೇರವಾಗಿ ಹಾಗೂ ತ್ವರಿತವಾಗಿ ಮಾಹಿತಿ ತಲುಪಿಸುವ ಜೊತೆಗೆ 100ರಷ್ಟು ಫಲಿತಾಂಶ ಪಡೆಯಲು ಈ ಯೋಜನೆಯಿಂದ ಸಾಧ್ಯ. ಹಿಮಾಚಲ ಪ್ರದೇಶದಲ್ಲಿ ಈ ಯೋಜನೆ ಮೊದಲಿಗೆ ಜಾರಿಯಾಗಿದ್ದು, ರಾಜ್ಯದಲ್ಲೂ ಆರಂಭಿಸಿರುವ ಯೋಜನೆಯಿಂದಾಗಿ ದೇಶದಲ್ಲೇ ಉತ್ತಮ ಕಾರ್ಯಕ್ರಮಕ್ಕೂ ಮಾದರಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ರಾಜ್ಯ ಮಾಹಿತಿ ಅಧಿಕಾರಿ ವಿನಾಯಕ್ ಇ-ವಿಧಾನ ಅಳವಡಿಕೆ, ಮೊಬೈಲ್ ಆ್ಯಪ್ ಮೂಲಕ ಬಳಕೆ ಸೇರಿದಂತೆ ಇನ್ನಿತರ ತಾಂತ್ರಿಕ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯದರ್ಶಿ ವಿಜಯ್‍ಭಾಸ್ಕರ್, ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ