ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊಸ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಪ್ರಗತಿಗೆ ಪೂರಕವಾಗಬೇಕು: ಡಾ.ಎಚ್.ಎಂಚಂದ್ರಶೇಖರ್ ಕರೆ

Varta Mitra News

ಬೆಂಗಳೂರು, ನ.2- ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವಿe್ಞÁನ ಹಾಗೂ ಮಾಹಿತಿ ತಂತ್ರe್ಞÁನ ಕ್ಷೇತ್ರದಲ್ಲಿ ಆವಿಷ್ಕಾರವಾಗುತ್ತಿರುವ ಹೊಸ ವಿಷಯಗಳಲ್ಲಿ ಇಂದಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ದೇಶದ ಪ್ರಗತಿಗೆ ಪೂರಕವಾಗಿ ನಡೆದು ಕೊಳ್ಳಬೇಕೆಂದು ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಎಚ್.ಎಂಚಂದ್ರಶೇಖರ್ ಕರೆನೀಡಿದರು.

ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ನೂತನ ಆವಿಷ್ಕಾರಗಳ ಬಗ್ಗೆ ತಿಳಿದು ಪ್ರಗತಿಗೆ ಪೂರಕ ವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಅತಿಥಿಸೀಕ ಸಂಸ್ಥೆಯ ಸಿಇಒ ಡಾ.ಉಷಾ ಈ ಸ್ವರ್ಣ ಮಾತನಾಡಿ ವಿದ್ಯಾರ್ಥಿಗಳು ವಿದ್ಯೆಯ ಮಹತ್ವ, ಭವಿಷ್ಯ ರೂಪುರೇಷೆಗಾಗಿ, ಮುಂದಿನ ಯೋಜನೆಗಳ ಅವಕಾಶಗಳ ಬಗ್ಗೆ ಅರಿವು ಮೂಡಿಸಿ ಕೊಂಡು ಶೈಕ್ಷಣಿಕ ಕ್ಷೇತ್ರವನ್ನು ಆಯ್ಕೆಮಾಡಿ ಕೊಳ್ಳಬೇಕೆಂದರು.

ಹೆಚ್ಚುವರಿ ಸಮಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕಳೆಯದೆ, ಮಾಹಿತಿ ತಂತ್ರe್ಞÁನ ವಿಷಯದ ಹೊಸ ಯೋಜನೆಗಳತ ್ತ ದೃಷ್ಠಿಹರಿಸಿ ತಮ್ಮ ಪ್ರತಿಭೆಯನ್ನು ಪ್ರದಶಿ ್ಸಬೇಕು ಹಾಗೂ ಅವಕಾಶಗಳನು ್ನ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.
ಸಿಇಒ ನಿರ್ದೇಶಕ ಡಾ.ಆನಂದ್, ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕಿ ಡಾ.ರೋಸ್ಕವಿತ್, ಪ್ರಾಂಶುಪಾಲರಾದ e್ಞÁನೇಶ್, ,ಆದಿಲಕ್ಷ್ಮಿ, ಅಕಾಡಮಿ ಕ್ಕೌನ್ಸ್ಸಿಲ್ ಜ್ಯೋತಿಗುಪ್ತಾ, ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ