ಬೊಫೋರ್ಸ್ ಕೇಸ್: 2005ರ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಸಿಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿಬೊಫೋರ್ಸ್ ಪ್ರಕರಣದಲ್ಲಿ ಹಿಂದೂಜಾ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ್ದ 2005 ರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಸುಪ್ರಿಂಕೋರ್ಟ್ ಬಳಿ ಅರ್ಜಿಯು ತಡವಾಗಿ ಬಂದಿವೆ ಎಂದು ಪ್ರಸ್ತಾಪಿಸಿ ಸಿಬಿಐ ಮನವಿಯನ್ನು ತಿರಸ್ಕರಿಸಿದೆ. ಲಂಡನ್ ಮೂಲದ ಬಿಲಿಯನೇರ್ ಹಿಂದೂಜಾ ಸಹೋದರರಿಗೆ 2005 ರ ಮೇ 31 ರಂದು ದೆಹಲಿ ಹೈಕೋರ್ಟ್ ಬೊಫೋರ್ಸ್ ಹಗರಣದಲ್ಲಿ ಕ್ಲೀನ್ ಚಿಟ್ ನೀಡಿತ್ತು.

ಶ್ರೀಚಂದ್ ಹಿಂದೂಜಾ ಮತ್ತು ಅವರ ಸಹೋದರರಾದ ಗೋಪಿಚಂದ್ ಮತ್ತು ಪ್ರಕಾಶ್ ಅವರು  8.3 ದಶಲಕ್ಷ $ ನಷ್ಟು ಲಂಚವನ್ನು ಸ್ವೀಡನ್ ಮೂಲದ ಎಬಿ ಬೋಫೋರ್ಸ್ ಕಂಪನಿಯಿಂದ  ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 2005 ರಲ್ಲಿ  ಹಿಂದೂಜಾ ಸಹೋದರಿಗೆ ಕ್ಲೀನ್ ಚಿಟ್ ನೀಡಿತ್ತು.

ಈಗ ಈ ತೀರ್ಪನ್ನು ಪರ್ಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರ ನೇತೃತ್ವದ ಪೀಠ ಸಿಬಿಐ ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾಗೊಳಿಸಿದೆ. ಭಾರತ 1986 ರಲ್ಲಿ ಸ್ವೀಡನ್ ಮೂಲದ ಎಬಿ ಬೊಫೋರ್ಸ್ ಕಂಪನಿ ಜೊತೆ  ಬಂದೂಕು ಖರೀದಿಗಾಗಿ ಒಪ್ಪಂದ ಮಾಡಿಕೊಂಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ