
ಬೆಂಗಳೂರು,ನ.2-ಬಾಪೂಜಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಅಜ್ಮಲ್ ಬೇಗ್ ರಸ್ತೆಗಳಿಗೆ ಮರು ನಾಮಕರಣ ಮಾಡುವ ಮೂಲಕ ಉತ್ತರಪ್ರದೇಶದ ಮುಖ್ಯಮಂತ್ರಿಗೆ ಸೆಡ್ಡು ಹೊಡೆದಿದ್ದಾರೆ.
ಬಾಪೂಜಿನಗರ ವಾರ್ಡ್ನ ಖಾದ್ರಿ ಶಾಮಣ್ಣ ರಸ್ತೆಗೆ ಗಫೂರ್ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ಅದೇ ರೀತಿ ಸುನ್ನಿ ಚೌಕ್ದಿಂದ ಮೈಸೂರು ರಸ್ತೆವರೆಗಿನ ಪೈಪ್ಲೈನ್ ರಸ್ತೆಗೆ ಸುಭಾನಿಯ ಮಸೀದಿ, ಸಂತೋಷ್ ಟೆಂಟ್ನಿಂದ ಶೋಭಾ ಟೆಂಟ್ವರೆಗಿನ ರಸ್ತೆಗೆ ಜಾಮೀಯ ಮಸೀದಿ ಹಾಗೂ ಶಾಮಣ್ಣ ಗಾರ್ಡನ್ ಅಂಡರ್ಪಾಸ್ನ ಪೈಪ್ಲೈನ್ ರಸ್ತೆಗೆ ಗಫೂರ್ ರಸ್ತೆ, ಶಾಮಣ್ಣ ಗಾರ್ಡನ್ 6ನೇ ಅಡ್ಡರಸ್ತೆಗೆ ಖುದಾದತ್ ಮತ್ತು ಬಾಪೂಜಿನಗರ 1ನೇ ಮುಖ್ಯರಸ್ತೆಗೆ ಹೀರಾ ಮಸೀದಿ ಹೆಸರು ನಾಮಕರಣ ಮಾಡಲು ಮುಂದಾಗಿದ್ದಾರೆ.
ಹಾಲಿ ಇರುವ ರಸ್ತೆಗಳ ಹೆಸರಗಳನ್ನು ಬದಲಿಸಿ ಹೊಸದಾಗಿ ನಾಮಕರಣ ಮಾಡುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲು ಬಿಬಿಎಂಪಿ ಸದಸ್ಯ ಅಜ್ಮಲ್ ಬೇಗ್ ಮುಂದಾಗಿದ್ದಾರೆ.