ರಾಮನಗರ: ರಾಮನಗರ ಕ್ಷೇತ್ರದ ಉಪಚುನಾವಣೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಚುನಾವಣಾ ಕಣದಿಂದಲೇ ಹಿಂದೆ ಸರಿದು, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ನಾನು ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯವರು ಯಾರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಟಿಕೆಟ್ ಕೊಟ್ರು. ಕೈಯಲ್ಲಿ ಬಾವುಟ ಇಟ್ರು. ಬಳಿಕ ಯಾರೂ ರಾಮನಗರದತ್ತ ಮುಖಮಾಡಿಲ್ಲ. ರಾಜ್ಯಾಧ್ಯಕ್ಷ ಯಡಿಯೂರಪ್ಪನವರೂ ನನ್ನ ಪರ ಪ್ರಚಾರಕ್ಕೇ ಬರಲಿಲ್ಲ. ಜಿಲ್ಲೆಯಲ್ಲಿ ಪಕ್ಷ ಗೆಲ್ಲಬೇಕೆಂಬ ಮನಸ್ಸು ಬಿಜೆಪಿ ನಾಯಕರಿಗೇ ಇಲ್ಲ ಎಂದು ವಗದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗಾಗಲ್ಲ. ಬಿಎಸ್ ಯಡಿಯೂರಪ್ಪನವರಿಗೆ ಕರೆ ಮಾಡಿದರೂ ಮಾತನಾಡಲ್ಲ. ಸಿ ಪಿ ಯೋಗೇಶ್ವರ್ ಅವರು ನನ್ನನ್ನು ಬಿಜೆಪಿ ಕರೆತಂದರು. ಆದರೆ ನಾನು ಬಿಜೆಪಿ ಸೇರಿರುವುದೇ ಬಿಜೆಪಿ ಹಲವರಿಗೆ ಇಷ್ಟ ಇರಲಿಲ್ಲ. ಸಿ ಪಿ ಯೋಗೇಶ್ವರ್ ಕಂಡರೇ ಸದಾನಂದಗೌಡರಿಗೆ ಆಗಲ್ಲ. ಮಂಡ್ಯದ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಮನಗರದ ಮೇಲೆಯೇ ಎಲ್ಲರೂ ಮಂಡ್ಯಕ್ಕೆ ಹೋಗಬೇಕು. ಆದರೆ ಎಲ್ಲರೂ ಮಂಡ್ಯ ಅಭ್ಯರ್ಥಿ ಗೆಲುವಿಗಾಗಿ ಪ್ರಜಾರಕ್ಕೆ ಬಿಜೆಪಿ ನಾಯಕರು ಹೋಗುತ್ತಾರೆ ಹೊರತು ಒಮ್ಮೆ ಕೂಡ ನನ್ನ ಪರ ಪ್ರಚಾರ ಮಾಡಲು ರಾಮನಗರಕ್ಕೆ ಬರಲಿಲ್ಲ ಇದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.
ಇನ್ನು ಓರ್ವ ಅಭ್ಯರ್ಥಿಯಾಗಿ ನಾನು ನಾಯಕರಿಗೆ ಕರೆ ಮಾಡಿದರೂ ಓಬ್ಬನೇ ಒಬ್ಬ ರಾಜ್ಯ ಬಿಜೆಪಿ ನಾಯಕರೂ ಕರೆ ಸ್ವೀಕರಿಸುತ್ತಿಲ್ಲ. ಮಾತನಾಡುತ್ತಲೂ ಇಲ್ಲ. ಈ ಎಲ್ಲಾ ಬಿಜೆಪಿ ನಡೆಯಿಂದ ಬೇಸತ್ತು ತಾವು ಮತ್ತೆ ಮಾತ್ರ ಪಕ್ಷ ಕಾಂಗ್ರೆಸ್ ಗೇ ಮರಳುತ್ತಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಚುನಾವಣಾ ಅಧಿಕಾರಿಗಳಿಗೂ ಪತ್ರ ಮುಖೇನ ವಿಷಯ ತಿಳಿಸಿದ್ದು, ತಾವು ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರಾಮನಗರ ಚುನಾವಣಾ ಕಣದಿಂದ ಹಿಂದೆಸರಿದು, ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದರು.
ಒಟ್ಟಿನಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಲ್ ಚಂದ್ರಶೇಖರ್, ಈಗ ಮತ್ತೆ ಮಾತೃಪಕ್ಷ ಸೇರಿದ್ದು, ಬಿಜೆಪಿ ನಾಯಕರ ಧೋರಣೆಗಳ ವಿರುದ್ಧವೇ ಸಿಡಿದೆದ್ದಿದ್ದಾರೆ. ಚುನಾವಣೆಗೆ ಕೇವಲ ಎರಡು ದಿನಗಲು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿಯ ಈ ನಡೆ ಉಪಚುನಾವಣಾ ಕಣದಲ್ಲಿ ಹಲವು ಕುತೂಹಲವನ್ನು ಇಮ್ಮಡಿಗೊಳಿಸಿದೆ.
Ramanagara,by election,L Chandrashekhar,BJP Candidate