ಬೆಂಗಳೂರು, ನ.1- ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ಉಗ್ರಪ್ಪ ಅವರು ನನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯ ಕೊಡಿಸುವ ಬದಲು ದೂರು ವಾಪಸ್ ಪಡೆಯಿರಿ ಎಂದು ನನ್ನ ಮೇಲೆ ಒತ್ತಡ ಹೇರಿದ್ದರು. ಇಂತಹವರು ಜನಪ್ರತಿನಿಧಿಯಾಗಲು ಸೂಕ್ತವೇ ಎಂದು ಶಿವಮೊಗ್ಗ ಮೂಲದ ಮಮತಾಸಿಂಗ್ ಅವರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗಳಿಗೆ ನನ್ನ ನಾದಿನಿ ಮಗನಿಂದ ನಿರಂತರವಾಗಿ ಒಂದು ವರ್ಷ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಉಗ್ರಪ್ಪ ಅವರನ್ನು 2006ರಲ್ಲಿ ಭೇಟಿಯಾಗಿದ್ದೆ. ಆಗ ಪೆÇಲೀಸರ ಮೂಲಕ ಸಹಾಯ ಮಾಡಿದ್ದರು. ನಂತರ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ನಮಗೆ ಹೈಕಮಾಂಡ್ನಿಂದ ಒತ್ತಡ ಬರುತ್ತಿದೆ. ಹಾಗಾಗಿ ನೀವು ದೂರು ಹಿಂಪಡೆಯಿರಿ ಎಂದು ಹೇಳಿದ್ದರು.
ನನಗೆ ಎಲ್ಲರ ನೆರವು ಬೇಕಾಗಿದೆ. ನಾನು ಕ್ಯಾನ್ಸರ್ ಬಾಧಿತೆ. ಉಗ್ರಪ್ಪ ಅವರು ವಕೀಲರಾಗಿ, ಪರಿಷತ್ ಸದಸ್ಯರಾಗಿ ನೆರವು ನೀಡಲಿಲ್ಲ. ಇಂತಹವರು ಬಳ್ಳಾರಿಯನ್ನು ಪ್ರತಿನಿಧಿಸಲು ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.
ಉಗ್ರಪ್ಪ ಸ್ಪಷ್ಟನೆ: ಇವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಉಗ್ರಪ್ಪ ಅವರು, ನನ್ನಿಂದ ಯಾವುದೇ ತಪ್ಪಾಗಿಲ್ಲ. ಹಾಗೇನಾದರೂ ತಪ್ಪಾಗಿದ್ದರೆ ಅಂದೇ ಏಕೆ ಹೇಳಲಿಲ್ಲ. ಇದೆಲ್ಲ ಬಿಜೆಪಿಯವರ ಕುತಂತ್ರ ಎಂದು ಸ್ಪಷ್ಟಪಡಿಸಿದ್ದಾರೆ.