ಬೆಂಗಳೂರು, ನ.1- ದೀಪಾವಳಿ ಹಬ್ಬದ ನಿಮಿತ್ತ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಿಲ್ಲರೆಯಾಗಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪೆÇಲೀಸ್ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಡೈರೆಕ್ಟರ್ ಜನರಲ್ ಆಫ್ ಪೆÇಲೀಸ್, ಹೋಮ್ ಗಾಡ್ರ್ಸ್ ಮತ್ತು ಸಿವಿಲ್ ಡಿಫೆನ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸಸ್ನಿಂದ ಪರಿಶೀಲಿಸಿ ನೀಡಲಾಗಿರುವ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆಯಾಗಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಂದ ಅರ್ಜಿಗಳನ್ನು ಕರೆಯಲಾಗಿದೆ.
ಅರ್ಜಿದಾರರು ಖುದ್ದಾಗಿ ಅರ್ಜಿಯನ್ನು ನ.2ರಂದು (ನಾಳೆ) ಬೆಳಗ್ಗೆ 11ರಿಂದ ಸಂಜೆ 5ರ ಒಳಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.
ಸ್ವೀಕರಿಸಲಾದ ಅರ್ಜಿಗಲ ಸಂಬಂಧ ಚಿಲ್ಲರೆ ಪಟಾಕಿ ಮಳಿಗೆಗಳಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲು ನ.3ರಂದು ಮಧ್ಯಾಹ್ನ 3 ಗಂಟೆಗೆ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಲಾಟರಿ ನಡೆಸಲಾಗುವುದು.
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಪರವಾನಗಿಗಳನ್ನು ನ.4ರಂದು ಸಂಜೆ 5 ಗಂಟೆಯ ನಂತರ ನೀಡಲಾಗುವುದು ಎಂದು ಪೆÇಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.