ಬೆಂಗಳೂರು: ಪ್ರತಿ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿ ಜನರ ಮನಗೆಲ್ಲುತ್ತಿರುವ ಹಿರಿಯ ನಯ ಅನಂತ್ ನಾಗ್ ಇದೀಗ ಮತ್ತೆ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಅವರು ರತ್ನ ಪರೀಕ್ಷಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಲಂಡನ್ ನಲ್ಲಿ ಇದಾಗಲೇ ಮುಗಿದಿದ್ದು ಮಾನ್ವಿತಾ ಹರೀಶ್, ವಸಿಷ್ಟ ಸಿಂಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಚಿತ್ರೀಕರಣದ ಮುಂದಿನ ಹಂತ ಕೆಲ ದಿನಗಳಲ್ಲೇ ಪ್ರಾರಂಭಗೊಳ್ಳಲಿದ್ದು ಬೆಂಗಳೂರಿನಲ್ಲೇ ನಡೆವ ಈ ಭಗದ ಚಿತ್ರೀಕರಣದಲ್ಲಿ ಅನಂತ್ ನಾಗ್ ಪಾಲ್ಗೊಳ್ಳಲಿದ್ದಾರೆ.
ನಿರ್ದೇಶಕ ನಾಗತಿಹಳ್ಳಿ ಮಾತ್ರ ಚಿತ್ರ ಬಿಡುಗಡೆಯವರೆಗೂ ಚಿತ್ರದಲ್ಲಿನ ಅನಂತ್ ನಾಗ್ ಪಾತ್ರದ ಕುರಿತಂತೆ ಯಾವುದೇ ಹೆಚ್ಚು ವಿವರ ನೀಡಲು ಬಯಸುವುದಿಲ್ಲ. ಕನ್ನಡಪ್ರಭಕ್ಕೆ ಮಾನ್ವಿತಾ ಹಾಗೂ ವಸಿಷ್ಟ ಅವರೊಡನೆ ಇರುವ ಅನಂತ್ ನಾಗ್ ಫೋಟೋ ದೊರಕಿದ್ದು ಈ ಬಗ್ಗೆ ನಾಗತಿಹಳ್ಳಿ ಅವರನ್ನು ಪ್ರಶ್ನಿಸಿದಾಗ ಅವರು ಮೌನಕ್ಕೆ ಶರಣಾಗಿದ್ದರು.
“ಈಗ ನಾನು ಹೇಳುವುದಿಷ್ಟೇ, ಅನಂತ್ ನಾಗ್ ಈ ಚಿತ್ರದಲ್ಲಿ ರತ್ನಶಾಸ್ತ್ರಜ್ಞರ ಪಾತ್ರ ವಹಿಸಿದ್ದಾರೆ.ಇವರು ಭೂವಿಜ್ಞಾನ ಮೂಲಕ ಕೆಲಸ ನಿರ್ವಹಿಸುವ ರತ್ನಶಾಸ್ತ್ರಜ್ಞ ಹೊರತಾಗಿ ರತ್ನಗಳ ಪರೀಕ್ಷಕನಾಗಿ ಜನರಿಗೆ ಮಾರಾಟ ಮಾಡುವ ರತ್ನದ ವ್ಯ್ಪಾರಿಯಲ್ಲ.ಅವರು ಸ್ಕ್ರಿಪ್ಟ್ ಮತ್ತು ಅವರ ಪಾತ್ರವನ್ನು ತಿಳಿದ ಅನಂತ್ ನಿಜಕ್ಕೂ ರೋಮಾಂಚಿತರಾಗಿದ್ದರು” ನಾಗತಿಹಳ್ಳಿ ಹೇಳಿದ್ದಾರೆ.
ಈ ನಿರ್ದಿಷ್ಟ ಪಾತ್ರಕ್ಕಾಗಿ, ಅಮೆರಿಕಾದ ಖ್ಯಾತ ರತ್ನವಿಜ್ಞಾನಿ ಡಾ. ಮಂಜುನಾಥ ಅನಂತ್ ಅವರಿಗೆ ರತ್ನಗಳ ಬಳಜ್ಕೆಯ ಕುರಿತಂತೆ ಕೆಲವು ಅಂಶಗಳನ್ನು ಸೂಚಿಸಿದ್ದಾರೆ.”ನಾನು ಈ ಪಾತ್ರಕ್ಕೆ ಜೀವತುಂಬಲು ಬಯಸುವೆ” ಅನಂತ್ ಹೇಳುತ್ತಾರೆ.
ವೈ.ಎನ್. ಶಂಕರೇಗೌಡ ಈ ಚಿತ್ರದ ನಿರ್ಮಾಪಕರಾಗಿದ್ದು ಅವರ ಪುತ್ರಿ ಕನಸು ಈ ಕಥೆಯನ್ನು ಬರೆದಿದ್ದಾರೆ.ನಿರ್ದೇಶಕರು ತಮ್ಮ 90ರ ದಶಕದ ಸೂಪರ್ ಹಿಟ್ ಚಿತ್ರ “ಅಮೆರಿಕಾ ಅಮೆರಿಕಾ” ರೀತಿಯಲ್ಲಿಯೇ ಈ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಯೋಜಿಸಿದ್ದಾರೆ. ಪ್ರೇಮ ಮತ್ತು ಅಪರಾಧದ ಹಿನ್ನೆಲೆ ಇರುವ ಕಥೆಯನ್ನೊಳಗೊಂಡ ಈ ಚಿತ್ರ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಭಿನ್ನತೆಗಳನ್ನು ಕಾಣಿಸಲಿದೆ ಎನ್ನಲಾಗಿದೆ. ಇನ್ನೂ ವಿಶೇಷವೆಂದರೆ ಈ ಚಿತ್ರಕ್ಕೆ ಬ್ರಿಟಿಷ್ ಛಾಯಾಗ್ರಾಹಕ ವಿಲ್ ಪ್ರೈಸ್ ಛಾಯಾಗ್ರಹಣವಿದೆ.