ಜಕಾರ್ತ್: ಇಂಡೋನೆಷ್ಯಾದ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ಲಯನ್ ಏರ್ ಕಂಪನಿಗೆ ಸೇರಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಎಂದು ಇಂಡೋನೇಷ್ಯಾದ ಮುಳುಗು ತಜ್ನರು ತಿಳಿಸಿದ್ದಾರೆ.
ವಿಮಾನಗಳ ಅವಶೇಷಗಳೆಡೆಯಿಂದ ಬ್ಲ್ಯಾಕ್ ಬಾಕ್ಸ್ ಪತ್ತೆಹಚ್ಚಲಾಗಿದೆ. ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದರಿಂದ ವಿಮಾನ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ವಿವರ ತಿಳಿಯಲಿದೆ.
189 ಪ್ರಯಾಣಿಕರು ಹಾಗೂ 7 ಸಿಬ್ಬಂದಿಗಳನ್ನೊಳಗೊಂಡ ಬೋಯಿಂಗ್ 737-800 ವಿಮಾನ ಸುಮಾತ್ರಾ ದ್ವೀಪ ಸಮೂಹ ಬಳಿ ಅ.29ರಂದು ಪತನಗೊಂಡಿತ್ತು. ಹಾರಾಟ ಅರಂಭಿಸಿ 13 ನಿಮಿಷಗಳಲ್ಲಿಯೇ ರಾಡರ್ ಸಂಪರ್ಕ ಕಳೆದುಕೊಂದಿದ್ದ ವಿಮಾನ ಪಶ್ಚಿಮ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. 189 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿಗಳು ದುರಂತ ಅಂತ್ಯಕಂಡಿದ್ದರು.