
ನವದೆಹಲಿ: ಏರ್ ಸೆಲ್ ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಗೆ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಬ್ಬರ ಬಂಧನಕ್ಕೆ ನೀಡಲಾಗಿದ್ದ ಮಧ್ಯಂತರ ರಕ್ಷನೆ ಅವಧಿಯನ್ನು ನ.06 ವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣ ಸಂಬಂಧ ಇಬ್ಬರೂ ಆರೋಪಿಗಳ ಮಧ್ಯಂತರ ರಕ್ಷಣೆಯನ್ನು ನ.26 ರವರೆಗೆ ವಿಸ್ತರಿಸಿದ್ದು, ಅದೇ ದಿನಾಂಕಕ್ಕೆ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನಿಗದಿಪಡಿಸಿದೆ. ಅ.08 ರಂದು ನ.1 ರವರೆಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತ್ತು.
ಅ.31 ರಂದು ಜಾರಿ ನಿರ್ದೇಶನಾಲಯ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಕರಣ ಸಂಬಂಧ ಚಿದಂಬರಂ ಅವರು ತನಿಖೆ ನಡೆಸಲು ಸಹಕರಿಸುತ್ತಿಲ್ಲ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಅವಕಾಶ ನೀದಬೇಕೆಂದು ಇಡಿ ಮನವಿ ಮಾಡಿತ್ತು. ಆದರೆ ಇಂದು ನ್ಯಾಯಾಲಯ ಇಬ್ಬರು ಆರೋಪಿಗ ಬಂಧನಕ್ಕೆ ನೀಡಲಾಗಿದ್ದ ರಕ್ಷಣಾ ಅವಧಿಯನ್ನು ವಿಸ್ತರಿಸಿದ್ದು, ಇಬ್ಬರೂ ಸಧ್ಯ ನಿರಾಳರಾಗಿದ್ದಾರೆ.
3500 ಕೋಟಿ ಮೊತ್ತದ ಹಗರಣ ಇದಾಗಿದ್ದು, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಮೊದಲ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಕರಣ ಸಂಬಂಧ ಸಿಬಿಐ ಹಾಗೂ ಇದಿ ತನಿಖೆ ನಡೆಸಿದ್ದು, ಈ ಸಂಬಂಧ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿದೆ.