
ನವದೆಹಲಿ: ಸೆಂಟ್ರಲ್ ಬ್ಯಾಂಕ್ಗೆ ಸಾಲ ನೀಡುವಿಕೆ ವಿಚಾರವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ಆರ್ಬಿಐ ಗೌವರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಆರ್ಬಿಐ ಗೌವರ್ನರ್ ಹುದ್ದೆಗೆ ರಾಜೀನಾಮೆ ನೀಡುವ ಎಲ್ಲ ಅವಕಾಶಗಳು ಮುಕ್ತವಾಗಿವೆ ಎಂದು ಊರ್ಜಿತ್ ಪಟೇಲ್ ಹೇಳಿರುವುದಾಗಿ ಬಲ್ಲಮೂಲಗಳು ತಿಳಿಸಿವೆ. ಮತ್ತೊಂದು ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಮತ್ತು ಆರ್ಬಿಐ ಗೌವರ್ನರ್ ನಡುವೆ ಸರಿಪಡಿಸಲಾಗದಷ್ಟು ಬಿಕ್ಕಟ್ಟು ಉಲ್ಬಣಿಸಿದೆ ಎನ್ನಲಾಗಿದೆ.
ಆರ್ಬಿಐನ ಆಂತರಿಕ ವಿಷಯಗಳಲ್ಲೂ ಕೇಂದ್ರ ಸರ್ಕಾರ ಮೂಗುತೂರಿಸುತ್ತಿದೆ. ಆರ್ಬಿಐನ ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲೂ ನಿರ್ದೇಶನ ನೀಡುತ್ತಿದೆ ಎಂದು ವರದಿ ಹೇಳಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ, ಆರ್ಬಿಐ ಆ್ಯಕ್ಟ್ ಸೆಕ್ಷನ್ 7 ಆಹ್ವಾನಿಸಿದೆ ಮತ್ತು ಅಪ್ರಸ್ತುತ ನಿರ್ದೇಶನಗಳನ್ನು ಆರ್ಬಿಐಗೆ ನೀಡುತ್ತಿದೆ, ನನಗೆ ಭಯವಾಗುತ್ತಿದೆ. ಈ ದಿನ ಇನ್ನು ಹೆಚ್ಚಿನ ಕೆಟ್ಟ ಸುದ್ದಿ ಬರಲಿದೆ,” ಎಂದು ಹೇಳಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ನಡೆದ ಸಭೆಯಲ್ಲಿ ಆರ್ಬಿಐ 2008ರಿಂದ 2014ರವರೆಗೆ ಸಾಲ ಕೊಡುವಿಕೆಯನ್ನು ತಡೆಯುವಲ್ಲಿ ವಿಫಲವಾಗಿದೆ. ಇದರಿಂದ ಬ್ಯಾಂಕ್ಗಳು ಕೆಟ್ಟ ಸಾಲದಲ್ಲಿ ಸಿಲುಕಿವೆ ಎಂದು ಆರ್ಬಿಐ ವಿರುದ್ಧ ಕಟುಟೀಕೆ ಮಾಡಿದ್ದರು.