10 ದಿನದೊಳಗೆ ರಫೇಲ್ ಒಪ್ಪಂದದ ದರ ತಿಳಿಸಲು ಕೇಂದ್ರಕ್ಕೆ ‘ಸುಪ್ರಿಂ’ ಸೂಚನೆ

ನವದೆಹಲಿ : ರಫೆಲ್ ಒಪ್ಪಂದದ ಬೆಲೆ ಮತ್ತು ಇತರ ವಿವರಗಳನ್ನು 10 ದಿನಗಳಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರಕ್ಕೆ ಆದೇಶಿಸಿದೆ.

ಇದೆ ಸಂದರ್ಭದಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ತನಗೆ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಕೇಂದ್ರ ಸರ್ಕಾರವು ಪ್ರಮುಖವಾಗಿರುವ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವಂತಿಲ್ಲ ಎಂದು ಅದು ತಿಳಿಸಿದೆ.

ಈ ಒಪ್ಪಂದ ವಿವರಗಳನ್ನು ಬಹಿರಂಗಪಡಿಸಲು ಮನೋಹರ್ ಲಾಲ್ ಶರ್ಮಾ ಮತ್ತು ವಿನೀತ್ ಧಂಡಾ ಅವರು ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠ  ವಿಚಾರಣೆ ನಡೆಸಿ 10 ದಿನಗಳ ಒಳಗೆ ಎಲ್ಲ ವಿವರವನ್ನು ಬಹಿರಂಗ ಪಡಿಸಲು ಸೂಚಿಸಿದೆ.

ಅಕ್ಟೋಬರ್ 10 ರಂದು ಸುಪ್ರಿಂಕೋರ್ಟ್ ಒಪ್ಪಂದಕ್ಕೆ ಕಾರಣವಾದ ನಿರ್ಧಾರ-ಪ್ರಕ್ರಿಯೆ, ತಾಂತ್ರಿಕ ವಿಧಾನಗಳಲ್ಲಿ ತೆಗೆದುಕೊಂಡ ಹಂತಗಳ ವಿವರಗಳನ್ನು” ಮೊಹರು ಕವರ್ನಲ್ಲಿ ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ