
ಕಾಬೂಲ್, ಅ.31-ಪ್ರತಿಕೂಲ ಹವಾಮಾನದಿಂದಾಗಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿ ಎಲ್ಲ 25 ಮಂದಿ ಮೃತಪಟ್ಟಿರುವ ದುರಂತ ಅಫ್ಘಾನಿಸ್ತಾನದ ಫರ್ಹಾ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಈ ಹೆಲಿಕಾಪ್ಟರ್ನಲ್ಲಿ ಇದ್ದವರಲ್ಲಿ ಬಹುತೇಕ ಮಂದಿ ಉನ್ನತ ಸೇನಾಧಿಕಾರಿಗಳಾಗಿದ್ದರು.
ಪರ್ವತಮಯ ಅನಾರ್ ದಾರಾ ಜಿಲ್ಲೆಯಿಂದ ಹೆರಾತ್ ಪ್ರಾಂತ್ಯಕ್ಕೆ ತೆರಳಲು ಮೇಲೇರಿದ ಈ ಹೆಲಿಕಾಪ್ಟರ್ ಇಂದು ಬೆಳಗ್ಗೆ 9.10ರಲ್ಲಿ ಪತನಗೊಂಡಿತು ಎಂದು ಪ್ರಾಂತ್ಯದ ರಾಜ್ಯಪಾಲರ ವಕ್ತಾರ ನಾಸಿರ್ ಮೆಹದಿ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಅಫ್ಘಾನಿಸ್ತಾನದ ಪಶ್ಚಿಮ ವಲಯದ ಉಪ ಸೇನಾ ಕಮ್ಯಾಂಡರ್ ಮತ್ತು ಫರ್ಹಾ ಪ್ರಾಂತೀಯ ಮಂಡಳಿ ಮುಖ್ಯಸ್ಥರೂ ಸಹ ಸಾವಿಗೀಡಾಗಿದ್ದಾರೆ.
ಪ್ರತಿಕೂಲ ಹವಾಮಾನವೇ ಸೇನಾ ಹೆಲಿಕಾಪ್ಟರ್ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.